ರಾಜಕೀಯ
ಮೈತ್ರಿ ಸರ್ಕಾರ ಉರುಳಿಸಲು 250 ಕೋಟಿ ರೂ ಹಂಚಿಕೆ ; “ರಾಜಿನಾಮೆ ಕೊಡ್ತೀವಿ ಆದ್ರೆ ಹಣ ವಾಪಸ್ ಕೊಡಲ್ಲ” ಎಂದ ಶಾಸಕರು
ಸುದ್ದಿದಿನ, ಬೆಂಗಳೂರು : ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ನಿವಾಸಕ್ಕೆ ಹೊರಟ ಕುಮಾರಸ್ವಾಮಿಯವರು ಕೆಲವೇ ಕ್ಷಣಗಳಲ್ಲಿ ಸಿದ್ದರಾಮಯ್ಯರನ್ನ ಭೇಟಿಯಾಗಲಿದ್ದಾರೆ. ಮಾಜಿ ಸಿಎಂ 12 ದಿನಗಳ ಫಾರಿನ್ ಟೂರ್ ಬಳಿಕ ಬೆಂಗಳೂರಿಗೆ ವಾಪಸ್ ಆಗಿದ್ದಾರೆ ಸಿದ್ದು.
ಕಳೆದೊಂದು ವಾರದಿಂದ ಮೈತ್ರಿ ಸರ್ಕಾರದ ಬುಡ ಅಲುಗಾಡಿಸ್ತಿರೋ ಅತೃಪ್ತರ ಬಣ
ಈ ಬಗ್ಗೆ ಸಿದ್ದು ಜತೆ ಮಾತುಕತೆ ನಡೆಸಲು ಸಿಎಂ ಕುಮಾರಸ್ವಾಮಿ ಸಿದ್ದು ಮನೆಗೆ ಹೊರಟಿದ್ದಾರೆ.
ಈಗಾಗಲೇ ಸಿದ್ದರಾಮಯ್ಯ ನಿವಾಸದಲ್ಲಿ ವೇಣುಗೋಪಾಲ್, ದಿನೇಶ್ ಗುಂಡೂರಾವ್ ಹಾಗೂ ಈಶ್ವರ್ ಖಂಡ್ರೆ ಅವರು ಇದ್ದಾರೆ.
ಮೈತ್ರಿ ಸರ್ಕಾರ ಬೀಳೋದು ಗ್ಯಾರಂಟಿಯಂತೆ
ಇದು ರಾಜ್ಯ ರಾಜಕಾರಣದ ಸ್ಫೋಟಕ ಸ್ಟೋರಿ ಯಾಗಿದ್ದು ನಾಳೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗಲಿದೆ. ಯಾವುದೇ ಕಾರಣಕ್ಕೂ ಈ ಮೈತ್ರಿ ಸರ್ಕಾರ ಉಳಿಯಲ್ಲ ಎಂಬುದು ಬಿಜೆಪಿ ಮುಖಂಡರ ಸಾಮಾನ್ಯ ಹೇಳಿಕೆಯಾಗಿ್ದೆದೆ. ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ, ವೇಣುಗೋಪಾಲ್ ಏನೇ ಕಸರತ್ತು ಮಾಡಿದ್ರೂ ಸರ್ಕಾರ ಉಳಿಯಲ್ಲ. ಸಿದ್ದರಾಮಯ್ಯ ವಾಪಸ್ ಬಂದು ಏನೇ ಮ್ಯಾಜಿಕ್ ಮಾಡಿದ್ರೂ ಸರ್ಕಾರ ಪತನ ಪಕ್ಕಾ ಆಗಿದೆ. 25 ಕಾಂಗ್ರೆಸ್ ಶಾಸಕರ ಸಂಪರ್ಕದಲ್ಲಿರುವ ಬಿಜೆಪಿ ನಾಯಕರು –
ನಾಳೆ 20 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡೋದು ಗ್ಯಾರಂಟಿಯಾಗಿದೆ. ಇನ್ನೂ ಐವರು ಶಾಸಕರು ರಾಜೀನಾಮೆ ನೀಡುವ ಗೊಂದಲದಲ್ಲಿದ್ದಾರೆ. ನಾಳೆ ಬೆಳಗ್ಗೆ ಸಿದ್ದು ಆಶೀರ್ವಾದ ಪಡೆದು ರಾಜೀನಾಮೆ ನೀಡಲಿರೋ ಈ ಶಾಸಕರು
ಸೆಪ್ಟೆಂಬರ್ 23ಕ್ಕೆ ಯಡಿಯೂರಪ್ಪ ಸಿಎಂ ಆಗೋದು ಪಕ್ಕಾ ಆಗಿದೆ. ಹೀಗಾಗಿಯೇ ಇಂದು ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಬಿಎಸ್ವೈ ಹೊಸ ಸರ್ಕಾರ ರಚನೆ ಬಗ್ಗೆ ಎಲ್ಲವೂ ಪ್ಲಾನ್ ಮಾಡಿಕೊಂಡಿದೆ ಬಿಜೆಪಿ.
ಬರೋಬ್ಬರಿ 250 ಕೋಟಿ ರೂ ಹಂಚಿಕೆ
ಹಾಗೇ ಮೈತ್ರಿ ಸರ್ಕಾರ ಬೀಳಿಸಲು ಬರೋಬ್ಬರಿ 250 ಕೋಟಿ ಹಂಚಲಾಗಿಯಂತೆ
ಈಗಾಗಲೇ ಕೆಲ ಶಾಸಕರಿಗೆ ತಲುಪಿದೆಯಂತೆ ಕೋಟಿ ಕೋಟಿ ಕಂತೆ ಹಣ. ಶಾಸಕರಿಗೆ ದುಡ್ಡು ತಲುಪಿರೋ ಬಗ್ಗೆ ಮುಖ್ಯಮಂತ್ರಿಗಳು ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ. ರಾಜೀನಾಮೆ ಬೇಕಾದ್ರೆ ಕೊಡ್ತೇವೆ, ದುಡ್ಡು ವಾಪಸ್ ಕೊಡಲ್ಲ ಅಂತಿರೋ ಶಾಸಕರು. ಕಾಂಗ್ರೆಸ್ ನಾಯಕರು ಫೋನ್ಗಳನ್ನ ಸ್ವೀಕರಿಸುತ್ತಿಲ್ಲ ಈ 20 ಶಾಸಕರು. ಯಾರ ಕೈಗೂ ಸಿಗದೆ ನಾಳೆ ನೇರವಾಗಿ ಸಿದ್ದರಾಮಯ್ಯರನ್ನ ಭೇಟಿ ಮಾಡಲಿದ್ದಾರೆ ಶಾಸಕರು.
ಸಿದ್ದು ಭೇಟಿ ನಂತರ ನೇರವಾಗಿ ಸ್ಪೀಕರ್ ಬಳಿ ಹೋಗಿ ರಾಜೀನಾಮೆ ನೀಡಲಿರುವ ಶಾಸಕರು,
ಫುಲ್ ಕನ್ಫ್ಯೂಸ್ನಲ್ಲಿರುವ ಇನ್ನುಳಿದ ಐವರು ಕಾಂಗ್ರೆಸ್ ಶಾಸಕರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401