ದಿನದ ಸುದ್ದಿ

ಪಶ್ವಿಮ ಬಂಗಾಳದಲ್ಲಿ ವಾಯುಭಾರ ಕುಸಿತ; ರಾಜ್ಯಾದ್ಯಂತ ಮುಂದಿನ 3 ದಿನಗಳಲ್ಲಿ ಭಾರೀ ಮಳೆ ನಿರೀಕ್ಷೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ನೈರುತ್ಯ ಮುಂಗಾರು ದಕ್ಷಿಣ ಒಳನಾಡಿನಲ್ಲಿ ಚುರುಕುಗೊಂಡಿದೆ. ಕರಾವಳಿ ( Karavali ) ಮತ್ತು ಉತ್ತರ ಒಳನಾಡಿನ ಅಲ್ಲಲ್ಲಿ ಮಳೆಯಾಗಿದೆ (Havy Rain).

ಹರದನಹಳ್ಳಿಯಲ್ಲಿ ಅತಿ ಹೆಚ್ಚು 13 ಸೆಂಟಿ ಮೀಟರ್ ಮಳೆಯಾಗಿದೆ. ಸಾಲಿಗ್ರಾಮ, ಹೆಬ್ಬೂರು 11, ಬೆಂಗಳೂರಿನ ಜಾಲಹಳ್ಳಿ 10, ಕುಣಿಗಲ್, ಕಳಸ 9, ಚಾಮರಾಜ ನಗರ, ಹೆಸರಘಟ್ಟ, ಬಾಳೆ ಹೊನ್ನೂರು 8, ಬೆಂಗಳೂರು ನಗರ, ಬೇಲೂರು 7, ದೇವನಹಳ್ಳಿ, ದೊಡ್ಡಬಳ್ಳಾಪುರ, ಕೊಟ್ಟಿಗೆ ಹಾರ, ಜಿಕೆವಿಕೆ 6, ಚಿಂಚೋಳಿ, ಮಾಗಡಿ, ಬಂಡೀಪುರ 5ಸೆಮಟಿ ಮೀಟರ್ ಮಳೆಯಾಗಿದೆ.

ಇದನ್ನೂ ಓದಿ | ದಾವಣಗೆರೆ | ಅ.15 ರಂದು ಬಸವಾದಿ ಶರಣ ದರ್ಶನ ಕಾರ್ಯಕ್ರಮ ; ‘ಲೀಕ್ ಔಟ್’ ನಾಟಕ ಪ್ರದರ್ಶನ 

ಮುನ್ಸೂಚನೆಯಂತೆ ಮುಂದಿನ 24 ಗಂಟೆಗಳಲ್ಲಿ ರಾಜ್ಯಾದ್ಯಂತ ಹಗುರದಿಂದ ಗುಡುಗುಸಹಿತ ಭಾರಿ ಮಳೆ ಬೀಳುವ ಸಂಭವ. ಶಿರಾಲಿಯಲ್ಲಿ ಗರಿಷ್ಠ ತಾಪಮಾನ 32.8 ಡಿಗ್ರಿ ಸೆಲ್ಸಿಯಸ್, ರಾಯಚೂರು ಮತ್ತು ದಾವಣಗೆರೆಯಲ್ಲಿ ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಬೆಂಗಳೂರು ಸುತ್ತಮುತ್ತ ಮೋಡಕವಿದ ವಾತಾವರಣ ಹಲವು ಬಾರಿ ಹಗುರದಿಂದ ಗುಡುಗು ಸಹಿತ ಭಾರೀ ಮಳೆ ಸಂಭವ. ಗರಿಷ್ಠ 28, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ನಿರೀಕ್ಷೆ ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version