ದಿನದ ಸುದ್ದಿ

ನಿಗಮ ಮಂಡಳಿ ನೌಕರರನ್ನು ಸರ್ಕಾರಿ ಸೇವೆಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ನಿಷೇಧ : ರಾಜ್ಯ ಸರ್ಕಾರದಿಂದ ಕಾಯ್ದೆ ಜಾರಿ

Published

on

ಸುದ್ದಿದಿನ,ಬೆಂಗಳೂರು : ಸಾರ್ವಜನಿಕ ವಲಯದಲ್ಲಿನ ಸಂಸ್ಥೆಗಳ ನೌಕರರ ವಿಲೀನಗೊಳಿಸುವಿಕೆಯು ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ತೀವ್ರ ಪರಿಣಾಮವನ್ನುಂಟು ಮಾಡಿ ರಾಜ್ಯದ ಹಣಕಾಸು ಅಪರಿಮಿತವಾಗಿ ಬರಿದಾಗುವಂತೆ ಮಾಡುತ್ತಿರುವುದರಿಂದ ಮತ್ತು ಇದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿರುವುದರಿಂದ, ಕರ್ನಾಟಕ ರಾಜ್ಯ ಸರ್ಕಾರವು ನಿಗಮ ಮಂಡಳಿ ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಸಂಸ್ಥೆಗಳ ನೌಕರರ ಸೇವೆಗಳನ್ನು ಸರ್ಕಾರಿ ಸೇವೆಗಳಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ನಿಷೇಧಿಸುವ ಕಾಯಿದೆಗೆ ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿ ಹೊರಡಿಸಿದೆ.

ಸಾರ್ವಜನಿಕ ವಲಯದ ಸಂಸ್ಥೆಗಳು ಹಲವು ಸಮಸ್ಯೆಗಳಿಂದ ಮುಚ್ಚಲ್ಪಡುತ್ತಿವೆ. ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ತಮ್ಮ ಸೇವೆಗಳನ್ನು ವಿಲೀನಗೊಳಿಸಬೇಕೆಂದು ಒತ್ತಾಯ ಮಾಡುತ್ತಿದ್ದು ಮತ್ತು ತಮ್ಮ ಸೇವೆಗಳನ್ನು ಸರ್ಕಾರಿ ಸೇವೆಯಲ್ಲಿ ವಿಲೀನಪಡಿಸಬೇಕೆಂದು ಕೋರಿ ನ್ಯಾಯಲಯಕ್ಕೆ ಮೊರೆ ಹೋಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಈ ಕಾಯ್ದೆ ಜಾರಿಗೆ ತಂದಿದೆ.

ಸರ್ಕಾರಿ ನೌಕರರಿಗೆ ಅನ್ವಯವಾಗುವಂತಹ ನೇಮಕಾತಿ, ಸೇವಾ ಷರತ್ತುಗಳು ಮತ್ತು ವೇತನ ಶ್ರೇಣಿಗಳನ್ನು ನಿಯಂತ್ರಿಸುವ ನಿಯಮಗಳು ಸಾರ್ವಜನಿಕ ವಲಯದ ಸಂಸ್ಥೆಗಳ ನೌಕರರಿಗೆ ಅನ್ವಯವಾಗುವ ನಿಯಮಗಳಿಗಿಂತ ಭಿನ್ನವಾಗಿದ್ದು, ಹೊಂದಿಕೆಯಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version