ದಿನದ ಸುದ್ದಿ
ಶನಿವಾರ ಸಂಜೆ ಕರ್ನಾಟಕ ರಕ್ಷಣಾ ವೇದಿಕೆ ಟ್ವಿಟರ್ ಅಭಿಯಾನ : #ರೈತಹೋರಾಟದೊಂದಿಗೆಕರ್ನಾಟಕ
ಇಂದು (ಶನಿವಾರ) ಸಂಜೆ ಐದು ಗಂಟೆಯಿಂದ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ #ರೈತಹೋರಾಟದೊಂದಿಗೆಕರ್ನಾಟಕ #KarnatakaWithFarmersProtest ಎಂಬ ಟ್ವಿಟರ್ ಅಭಿಯಾನ ಶುರುವಾಗುತ್ತಿದೆ. ನಮ್ಮ ಎಲ್ಲ ಕನ್ನಡಿಗರು ಈ ಅಭಿಯಾನಕ್ಕೆ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಈ ಹೋರಾಟವು ರೈತರ ಗೆ ಬೆಂಬಲಿಸಿ ನಡೆಯುತ್ತಿದೆ.
ಅನ್ನದಾತ ರೈತನ ಪರವಾದ ಹೋರಾಟದಲ್ಲಿ ಕರ್ನಾಟಕ ಎಂದೂ ಹಿಂದೆ ಬಿದ್ದಿಲ್ಲ. ಇಡೀ ದೇಶದ ರೈತರ ಆಂದೋಲನವನ್ನು ಎಂಭತ್ತರ ದಶಕದಲ್ಲಿ ಕರ್ನಾಟಕವೇ ಮುನ್ನಡೆಸಿತ್ತು ಎಂಬುದನ್ನು ಮರೆಯದಿರೋಣ. ರೈತವಿರೋಧಿಯೂ ಜನವಿರೋಧಿಯೂ ಆಗಿರುವ ಮೂರು ಕೃಷಿ ಮಸೂದೆಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂಬ ಈ ಬೇಡಿಕೆಗಳಿಗೆ ಕರವೇ ರೈತರಿಗೆ ಸಾತ್ ಕೊಡುತ್ತಿದೆ.
ರೈತರ ಹೋರಾಟವನ್ನು ಕೇಂದ್ರ ಸರ್ಕಾರ ಕರೆಯುತ್ತಿರುವುದು ಮತ್ತು ಅಲ್ಲಿನ ಇಂಟರ್ನೆಟ್ ವ್ಯವಸ್ಥೆ ಸ್ಥಗಿತಗೊಳಿರುವುದು. ಎಲ್ಲರೂ ರೈತರಿಗೆ ಆಗುತ್ತಿರುವ ತೊಂದರೆ.
ಕರವೇ ಎಂದರೆ ನಾಡಿನ ಹಿತಕ್ಕಾಗಿ ಸದಾ ಜೊತೆಗೆ ಇರುತ್ತೆ. ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು, ಕನ್ನಡ, ಮಹಿಳಾ, ಪ್ರಗತಿಪರ, ರೈತ, ದಲಿತ, ಕಾರ್ಮಿಕ ಸಂಘಟನೆಗಳು, ಜನಪರ ಹೋರಾಟಗಾರರು ನಾಳಿನ ಟ್ವಿಟರ್ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಟಿ.ಎ ನಾರಾಯಣಗೌಡರು ಹೇಳಿದ್ದಾರೆ.
ಇಡೀ ಕರ್ನಾಟಕವೇ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಸಂಪೂರ್ಣ ಮನಸಿನಿಂದ ಬೆಂಬಲಿಸುತ್ತಿದೆ ಎಂಬ ಸಂದೇಶವನ್ನು ಸ್ಪಷ್ಟವಾಗಿ ನೀಡುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕರವೇ ಸ್ಪಷ್ಟವಾಗಿ ತಿಳಿಸಿದೆ.
–ದಿವ್ಯಶ್ರೀ. ವಿ
ಅಧ್ಯಕ್ಷೆ, ಸಾಮಾಜಿಕ ಜಾಲತಾಣ
ಕರ್ನಾಟಕ ರಕ್ಷಣಾ ವೇದಿಕೆ
ಬೆಂಗಳೂರು
ಸುದ್ದಿದಿನ.ಕಾಂ|ವಾಟ್ಸಾಪ್|9980346243