ದಿನದ ಸುದ್ದಿ

ಕರ್ನಾಟಕ ಯಕ್ಷಗಾನ ಅಕಾಡೆಮಿ : ಕಲಾಸಂಸ್ಥೆಗಳಿಂದ ಅರ್ಜಿ ಆಹ್ವಾನ

Published

on

ಸುದ್ದಿದಿನ, ಬೆಂಗಳೂರು : ಯಕ್ಷಗಾನವನ್ನು ಪ್ರೀತಿಸಿ, ಅದರ ಉಳಿವು ಬೆಳವಿಗೆ, ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಶ್ರಮಿಸಿದ ಹಾಗೂ ಸೀಮಿತ ಪ್ರದೇಶದಲ್ಲಿ ಮಾತ್ರ ಪರಿಚಯಗೊಂಡ ಹಿರಿಯ ಕಲಾವಿದರನ್ನು ಹಾಗೂ ಯಕ್ಷಗಾನಕ್ಕೆ ಅವರು ನೀಡಿರುವ ಕೊಡುಗೆ ಸ್ಮರಿಸಿಕೊಳ್ಳವ ನಿಟ್ಟಿನಲ್ಲಿ ‘ಹಿರಿಯರ ನೆನಪು’ ಶೀರ್ಷಿಕೆಯ ಹಿರಿಯ ಕಲಾವಿದರ ಕಾರ್ಯಕ್ರಮ ನಡೆಸಲು ಕಲಾಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಕಾಡೆಮಿ ವತಿಯಿಂದ ಕಾರ್ಯಕ್ರಮ ನಡೆಸಲು ಸಂಸ್ಥೆಗೆ ರೂ.10 ಸಾವಿರ ನೀಡಲಾಗುವುದು. ಹೆಚ್ಚಿನ ವೆಚ್ಚಗಳನ್ನು ಸಂಸ್ಥೆಯವರೇ ವಹಿಸಿಕೊಳ್ಳಬೇಕು. ಒಂದು ಕಾರ್ಯಕ್ರಮದಲ್ಲಿ ಹಲವಾರು ಕಲಾವಿದರನ್ನು ಕುರಿತು ಕಾರ್ಯಕ್ರಮ ಕೂಡ ನಡೆಸಬಹುದಾಗಿದೆ.

‘ಹಿರಿಯರ ನೆನಪು’ ಸಂಸ್ಮರಣಾ ಕಾರ್ಯಕ್ರಮವನ್ನು ನಡೆಸಲು ಆಸಕ್ತಿಯಿರುವ ಕಲಾ ಸಂಸ್ಥೆಗಳು ಪೂರ್ಣ ವಿಳಾಸದೊಂದಿಗೆ (ದೂರವಾಣಿ/ ಮೊಬೈಲ್ ನಂಬರ್‍ನೊಂದಿಗೆ) ಅರ್ಜಿಯನ್ನು ಜುಲೈ, 25 ರೊಳಗಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು 560002 ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ದೂರವಾಣಿ 080-22113146 ಮೂಲಕ ಅಕಾಡೆಮಿಯನ್ನು ಸಂಪರ್ಕಿಸಬಹುದು ಎಂದು ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version