ಕ್ರೀಡೆ
ಪದಕ ವಿಜೇತೆ ಉಷಾರಾಣಿ ಪುರಸ್ಕರಿಸಿದ ಸರ್ಕಾರ
ಸುದ್ದಿದಿನ ಡೆಸ್ಕ್: ಏಷ್ಯನ್ ಗೇಮ್ಸ್ ಭಾರತದ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದ್ದು, ಏಷ್ಯಾನ್ ಗೇಮ್ಸ್ ನ ಕಬ್ಬಡಿಯಲ್ಲಿ ಬೆಳ್ಳಿ ಪದಕ ಗೆದ್ದ ಕನ್ನಡದ ಕಬಡ್ಡಿ ಆಟಗಾರ್ತಿ ಉಷಾರಾಣಿ ಅವರನ್ನು ಗೃಹ ಸಚಿವ ಹಾಗೂ ಡಿಸಿಎಂ ಪರಮೇಶ್ವರ್ ಬೆಂಗಳೂರಿನಲ್ಲಿ ಸನ್ಮಾನಿಸಿದರು.
ರಾಜ್ಯ ಪೊಲೀಸ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಉಷಾರಾಣಿ ರಾಷ್ಟ್ರ ಕಬ್ಬಡಿ ತಂಡವನ್ನು ಪ್ರತಿನಿಧಿಸಿದ್ದರು. ಸರ್ಕಾರದಿಂದ ೧೫ ಲಕ್ಷ ಚೆಕ್ ನೀಡಿ ಪರಮೇಶ್ವರ್ ಸನ್ಮಾನಿಸಿದರು. ಡಿಜಿ ನೀಲಮಣಿರಾಜು. ಎಡಿಜಿಪಿ ಭಾಸ್ಕರ್ ರಾವ್ ಮತ್ತು ಕಮಿಷನರ್ ಸುನೀಲ್ ಕುಮಾರ್ ಭಾಗಿಯಾಗಿದ್ದರು. ಸನ್ಮಾನದ ನಂತರ ಗೆಲುವಿನ ಸಂತಸವನ್ನು ಉಷಾರಾಣಿ ಹಂಚಿಕೊಂಡರು.