ರಾಜಕೀಯ
ಪ್ರತ್ಯೇಕ ಬಾವುಟ ಕೇಳಿದ ಮೊದಲ ಸಿಎಂ ಕರುಣಾನಿಧಿ
ಸುದ್ದಿದಿನ ಡೆಸ್ಕ್: ಕರುಣಾನಿಧಿ ಅವರು ತಮಿಳುನಾಡಿಗೆ ಪ್ರತ್ಯೇಕ ಬಾವುಟ ಕೇಳಿದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರರಾದವರು.
1970ರ ವೇಳೆಗೆ ಕರುಣಾ ಅವರು ತಮ್ಮ ರಾಜ್ಯಕ್ಕೆ ಪ್ರತ್ಯೇಕ ಬಾವುಟ ನೀಡಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಅದನ್ನು ನಿರಾಕರಿಸಿದ್ದರು.
ಇದು ದೇಶದಲ್ಲಿ ಪ್ರತ್ಯೇಕತೆ ಸೃಷ್ಟಿಸುತ್ತದೆ ಎಂಬ ಕಾರಣಕ್ಕೆ ಇಂದಿರಾ ಅವರು ಈ ಪ್ರಸ್ತಾವನೆಗೆ ಒಪ್ಪಿರಲಿಲ್ಲ. ಆದರೆ, ಇಂದಿರಾ ಅವರ ನಿರ್ಧಾರ ತಮಿಳಿಕರನ್ನು ಕೆರಳಿಸಿತ್ತು. ಈ ವಿಷಯವಾಗಿ ತಮಿಳುನಾಡಲ್ಲಿ ದೊಡ್ಡ ಪ್ರತಿಭಟನೆಗಳು ನಡೆದವು.
ಸುದ್ದಿದಿನ.ಕಾಂ|ವಾಟ್ಸಾಪ್|9986715401