ದಿನದ ಸುದ್ದಿ

ದಾವಣಗೆರೆ ಕಸಾಪ ಚುನಾವಣೆ | ಮಾ.29 ರಂದು ಬಿ.ವಾಮದೇವಪ್ಪ ನಾಮಪತ್ರ ಸಲ್ಲಿಕೆ

Published

on

ಸುದ್ದಿದಿನ,ದಾವಣಗೆರೆ : ಮೇ.09 ರಂದು ನಡೆಯಲಿರುವ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲಿರುವ ಬಿ.ವಾಮದೇವಪ್ಪ ಅವರು ಇದೇ ಬರುವ ಮಾ.29 ಸೋಮವಾರದಂದು ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ.

ಸೋಮವಾರ ಮಧ್ಯಾಹ್ನ 12-15ಕ್ಕೆ ದಾವಣಗೆರೆ ತಾಲೂಕು ಕಛೇರಿಯಲ್ಲಿ ಕ‌.ಸಾ.ಪ. ಜಲ್ಲಾ ಚುನಾವಣಾಧಿಕಾರಿಗಳಾದ ದಾವಣಗೆರೆ ತಾಲೂಕು ತಹಶೀಲ್ದಾರ ಅವರಿಗೆ ಬಿ.ವಾಮದೇವಪ್ಪ ಅವರ ನಾಮಪತ್ರವನ್ನು ಸಲ್ಲಿಸಲಾಗುವುದು. ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಬಿ.ವಾಮದೇವಪ್ಪ ಅವರ ಹಿತೈಷಿಗಳು ಹಾಜರಿರಬೇಕಾಗಿ ದಾವಣಗೆರೆಯ ಹಿರಿಯ ಸಾಹಿತಿಗಳು ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಸ್‌.ಟಿ.ಶಾಂತಗಂಗಾಧರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version