ದಿನದ ಸುದ್ದಿ
ವಾರಾಣಸಿಯಲ್ಲಿ ಕಾಶಿ-ತಮಿಳು ಸಂಗಮ; ಇಂದಿನಿಂದ ಆರಂಭ
ಸುದ್ದಿದಿನ ಡೆಸ್ಕ್ : ವಾರಾಣಸಿಯಲ್ಲಿ (Varanasi) ಒಂದು ತಿಂಗಳ ಕಾಲ ನಡೆಯಲಿರುವ ಕಾಶಿ-ತಮಿಳು ಸಂಗಮ ( Kashi – Tamil Sangam ) ಇಂದಿನಿಂದ ಆರಂಭವಾಗಿದೆ.
ತಮಿಳುನಾಡಿನ ಪ್ರತಿನಿಧಿಗಳ ಮೊದಲ ತಂಡ ನಾಳೆ ತಡರಾತ್ರಿ ವಾರಾಣಸಿ ತಲುಪಲಿದೆ. “ಆಜಾದಿ ಕಾ ಅಮೃತ್ ಮಹೋತ್ಸವ” ದ ಭಾಗವಾಗಿ ಮತ್ತು “ಏಕ್ ಭಾರತ್ ಶ್ರೇಷ್ಠ ಭಾರತ” ದ ಸ್ಪೂರ್ತಿಯನ್ನು ಎತ್ತಿ ಹಿಡಿಯಲು ಈ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಆಯೋಜಿಸುತ್ತಿದೆ.
ಖ್ಯಾತ ಶಿಕ್ಷಣತಜ್ಞ ಮತ್ತು ಭಾರತೀಯ ಶಿಕ್ಷಣ ಸಚಿವಾಲಯದ ಭಾರತೀಯ ಭಾಷೆಗಳ ಪ್ರಚಾರದ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷ ಪ್ರೊ.ಚಾಮು ಕೃಷ್ಣಶಾಸ್ತ್ರಿ, ಈ ಸಂಗಮ ಕಾರ್ಯಕ್ರಮ ಭಾಷೆಯ ಮಟ್ಟದಲ್ಲಿ ಎರಡು ವಿಭಿನ್ನ ಪ್ರದೇಶಗಳ ಜನರನ್ನು ಒಟ್ಟುಗೂಡಿಸುತ್ತದೆ ಎಂದು ಆಕಾಶವಾಣಿಗೆ ತಿಳಿಸಿದ್ದಾರೆ.
ತಮಿಳುನಾಡಿನಿಂದ ಬರುವ ಪ್ರತಿನಿಧಿಗಳು ಕಾಶಿ ವಿಶ್ವನಾಥ ದೇವಸ್ಥಾನ, ಅಯೋಧ್ಯೆ ದೇವಸ್ಥಾನ, ಪ್ರಯಾಗ್ ರಾಜ್ ಮತ್ತು ವಾರಾಣಸಿಯ ಪ್ರಸಿದ್ಧ ಗಂಗಾ ಆರತಿಯನ್ನು ವೀಕ್ಷಿಸಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅವರು ಶನಿವಾರ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಲಿದ್ದಾರೆ.
ಕಾಶಿ ತಮಿಳು ಸಂಗಮಂ, ಎರಡು ಪ್ರದೇಶಗಳ ವಿದ್ವಾಂಸರು, ವಿದ್ಯಾರ್ಥಿಗಳು, ತತ್ವಜ್ಞಾನಿಗಳು, ವ್ಯಾಪಾರಿಗಳು, ಕುಶಲಕರ್ಮಿಗಳು, ಕಲಾವಿದರು ಮತ್ತು ಜೀವನದ ಇತರ ಕ್ಷೇತ್ರಗಳ ಜನರು ಒಟ್ಟಿಗೆ ಸೇರಲು, ಅವರ ಜ್ಞಾನ, ಸಂಸ್ಕೃತಿ ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರರ ಅನುಭವದಿಂದ ಕಲಿಯಲು ಅವಕಾಶವನ್ನು ಒದಗಿಸುವ ಗುರಿ ಹೊಂದಿದೆ.
Discover the confluence between Tamil Nadu and Kashi with the #KashiTamilSangamam
Peep into centuries of knowledge and culture to rediscover shared heritage and traditions.
The celebrations begin today.
Follow us to know more.@KTSangamampic.twitter.com/4eHj96cQbJ
— Kashi Tamil Sangamam (@KTSangamam) November 17, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243