ದಿನದ ಸುದ್ದಿ

ಕಟೀಲು ದುರ್ಗಾಪರಮೇಶ್ವರಿ ದೇವಿ ಹೆಸರಲ್ಲಿ‌ ಕೋಟಿ ಕೋಟಿ ಲೂಟಿ..!

Published

on

ಸುದ್ದಿದಿನ ಡೆಸ್ಕ್ : ಕಟೀಲು ದುರ್ಗಾಪರಮೇಶ್ವರಿ ದೇವಿ ಹೆಸರಲ್ಲಿ ಕೋಟಿ ಕೋಟಿ ರೂ ಲೂಟಿ ನಡೆಯುತ್ತಿದೆ. ಕಟೀಲು ದಶಾವತಾರ ಯಕ್ಷಗಾನ ಮಂಡಳಿಯ ಹೆಸರಲ್ಲಿ ನಡೆಯುತ್ತಿರುವ ಇದು ದಶಾವತಾರಿ ಭ್ರಷ್ಠಾಚಾರವಾಗಿದ್ದು, ರಾಜ್ಯದಲ್ಲೇ ಅತೀ ಹೆಚ್ಚು ಆದಾಯ ತರೋ ಮೇಳದಲ್ಲಿ ಈ ಗೋಲ್ ಮಾಲ್ ನಡೆದಿದೆ.

ಸರಕಾರದ ವ್ಯಾಪ್ತಿಗೆ ಒಳಪಟ್ಟರೂ ಖಾಸಗಿ ವ್ಯಕ್ತಿಗಳ ಕೈವಶದಲ್ಲಿದೆ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಲಿ. ಆ ಕಾರಣದಿಂದ ಪ್ರಭಾವಿ ವ್ಯಕ್ತಿಗಳು ಪ್ರತೀ ಆರು ತಿಂಗಳಿಗೆ ಬರೋಬ್ಬರಿ ನಾಲ್ಕು ಕೋಟಿ ಲೂಟಿ ಮಾಡುತ್ತಿದ್ದಾರೆ. ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಕಟೀಲು ದುರ್ಗಾಪರಿಮೇಶ್ವರಿ ದೇಗುಲವು ದೇವಸ್ಥಾನದ ಅಧೀನದಲ್ಲಿ ನಡೆಸಲ್ಪಡುವ ಯಕ್ಷಗಾನ ಮೇಳ, ಕಟೀಲು ದುರ್ಗಾಪರಮೇಶ್ವರಿ ದಶಾವತಾರಿ ಯಕ್ಷಗಾನ ಮಂಡಳಿ ಆರು ತಂಡಗಳನ್ನು ಹೊಂದಿದೆ.

ಕಲ್ಲಾಡಿ ದೇವಿಪ್ರಸಾದ ಶೆಟ್ಟಿಯ ಭ್ರಷ್ಟಾಚಾರ

ಕಲ್ಲಾಡಿಯ ದೇವಿಪ್ರಸಾದ ಶೆಟ್ಟಿ ಯಕ್ಷಗಾನ ಮಂಡಳಿಯ ಅನಧಿಕೃತ ಯಜಮಾನ. ಈ ಯಕ್ಷಗಾನ ಮಂಡಳಿಯನ್ನು ಹರಾಜು ಪ್ರಕ್ರಿಯೆಯ ಮೂಲಕ ವಹಿಸಬೇಕು ಎಂದು ಹೈಕೋರ್ಟ್ ಸೂಚಿಸಿತ್ತು. ಆದರೆ ಹೈಕೋರ್ಟ್ ಆದೇಶಕ್ಕೂ, ಜಿಲ್ಲಾಧಿಕಾರಿ ಅದೇಶಕ್ಕೂ ಬೆಲೆ ನೀಡದೆ ಕೋಟಿ ಕೋಟಿ ಹಗಲು ದರೋಡೆ ನಡಯುತ್ತಿದೆ. ದೇವಸ್ಥಾನದ ಆದಾಯವಾಗಬೇಕಿದ್ದ ಏಳುವರೆ ಕೋಟಿ ರೂಪಾಯಿ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿಯ ಪಾಲಾಗಿ್ದೆದೆ. ಮೇಳವನ್ನು ಮುಟ್ಟುಗೋಲು ಹಾಕಿ ದೇವಸ್ಥಾನದ ವಶಕ್ಕೆ ನೀಡಬೇಕು ಎಂದು ಜಿಲ್ಲಾಧಿಕಾರಿಯಿಂದಲೂ ಸರಕಾರಕ್ಕೆ ವರದಿ ಸಲ್ಲಿಸಿದ್ದರೂ, ಹೈಕೋರ್ಟ್, ಜಿಲ್ಲಾಧಿಕಾರಿ ಆದೇಶದ ಬಳಿಕವೂ ಕಲ್ಲಾಡಿ ದೇವಿಪ್ರಸಾದ್ ವಶದಲ್ಲಿದೆ ಯಕ್ಷಗಾನ ಮಂಡಲಿ. 300 ಕಲಾವಿಧರನ್ನು ಹೊಂದಿರುವ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳ. ನೊಂದ ಕಲಾವಿದರಿಂದ ಆದಾಯ ತೆರಿಗೆ ಇಲಾಖೆಗೂ ದೂರುನೀಡಲಾಗಿದೆ. ಈ ಸಂಬಂಧ
ಕಟೀಲು ದುರ್ಗಾಪರಮೇಶ್ವರಿ ದೇವರ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿರುವ ಬಗ್ಗೆ ಐಟಿಗೂ ದೂರು ಸಲ್ಲಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version