ದಿನದ ಸುದ್ದಿ
ದಾವಣಗೆರೆ | ಇಂದು ಕವಿ ಕಾವ್ಯ ಭಾವ ಸಂಗಮ
ಸುದ್ದಿದಿನ, ದಾವಣಗೆರೆ : ತಿಂಗಳ ಅಂಗಳ ಸಾಹಿತ್ಯ ಸಾಂಸ್ಕೃತಿಕ ಬಳಗದ ವತಿಯಿಂದ ದಿನಾಂಕ : 20.03.2022 ರ ಭಾನುವಾರ (ಇಂದು) ಬೆಳಿಗ್ಗೆ 11 ಗಂಟೆಗೆ ದಂಪತಿಗಳಾದ ಶ್ರೀಮತಿ ಅನ್ನಪೂರ್ಣ ಪಾಟೀಲ್, ಗ್ರಂಥಪಾಲಕರು, ಸೀತಮ್ಮ ಬಾಲಕಿಯರ ಸರ್ಕಾರಿ ಪ.ಪೂ ಕಾಲೇಜು ದಾವಣಗೆರೆ, ಶ್ರೀ ಜಗದೀಶ ಎಸ್ ಮರಕಳ್ಳಿ, ವಕೀಲರು, ಇವರ ನೂತನ ಗೃಹ ಪ್ರವೇಶದ ಸವಿ ನೆನಪಿನ ಕವಿ – ಕಾವ್ಯ – ಭಾವಸಂಗಮ, ಹ್ಯಾಪಿನೆಸ್ ಡೇ ಮತ್ತು ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ಶ್ಯಾಮನೂರು ಗ್ರಾಮದ ಯುರೋಕಿಡ್ಸ್ ಸ್ಕೂಲ್ ಎದುರಿನ ರಸ್ತೆಯ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿರುವ ಪಾರ್ಕ್ ನಂ – 6, ಇ – ಬ್ಲಾಕ್ ನ ” ಭಾವ ಸಂಗಮ ” ನಿವಾಸದಲ್ಲಿ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ರಾಣೇಬೆನ್ನೂರು ಭರಮಗಿರಿ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷರು ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕರಾದ ಆದರ್ಶ ಸಾಧಕ ಮಹಿಳೆ ಶ್ರೀಮತಿ ಸರೋಜಿನಿ ಯರೇಶೀಮಿ ಅವರಿಗೆ ವಿಶೇಷ ಗೌರವ ಪುರಸ್ಕಾರ ನೀಡಲಾಗುವುದು.
ಅತಿಥಿ ಗಣ್ಯರಾಗಿ ದಾವಣಗೆರೆ ಜಿಲ್ಲಾ 11 ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯುಕ್ತ ಸರ್ವಾಧ್ಯಕ್ಷರಾದ ಹಿರಿಯ ಸಾಹಿತಿ ಶ್ರೀಮತಿ ಸುಶೀಲಾದೇವಿ ಆರ್ ರಾವ್ ಹಾಗೂ ದಾವಣಗೆರೆ ಜನ ಮಿಡಿತ ದಿನಪತ್ರಿಕೆಯ ಸಂಪಾದಕರಾದ ಜಿ ಎಂ ಆರ್ ಆರಾಧ್ಯ ಪಾಲ್ಗೊಳ್ಳುವರು.
ತಿಂಗಳ ಅಂಗಳ ಬಳಗದ ಸರ್ವ ಕವಿ ಮಿತ್ರರಿಂದ ಸಂತಸ, ಸಮೃದ್ಧಿ, ಮಹಿಳೆ ಹಾಗೂ ಮಾನವೀಯ ಮೌಲ್ಯ ಬಿಂಬಿಸುವ ಸ್ವರಚಿತ ಕವನ ವಾಚನ, ಅತಿಥಿ ಗಣ್ಯರ ಹಿತ ವಚನ , ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕಿ ಶ್ರೀಮತಿ ಸರೋಜಿನಿ ಯರೇಶೀಮಿ ಅವರ ಸೇವಾನುಭವದ ನುಡಿ ಸಿಂಚನದ ನಂತರ ಮಧ್ಯಾಹ್ನ 1 ಗಂಟೆಗೆ ಉತ್ತರ ಕರ್ನಾಟಕದ ಸವಿ ಭೋಜನದೊಂದಿಗೆ ಶುಭ ವಿದಾಯ ಸಂಪನ್ನವಾಗಲಿದೆ ಎಂದು ಬಳಗದ ಸಂಚಾಲಕ ಗಂಗಾಧರ ಬಿ ಎಲ್ ನಿಟ್ಟೂರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243