ಕ್ರೀಡೆ

ಕೆಸಿಸಿ ಕ್ರಿಕೆಟ್ ಲೀಗ್ : ಗಂಗಾ ವಾರಿಯರ್ಸ್‌ಗೆ ಶುಭಾಂಗ್ ಬದಲು ಸುಚಿತ್ ಸೇರ್ಪಡೆ

Published

on

ಸುದ್ದಿದಿನ, ಬೆಂಗಳೂರು: ರಾಜ್ಯ ರಣಜಿ ತಂಡದ ಆಲ್‌ರೌಂಡರ್, ಮೈಸೂರು ವಾರಿಯರ್ಸ್ ತಂಡದ ನಾಯಕ ಜೆ.ಸುಚಿತ್, ಕನ್ನಡ ಚಲನಚಿತ್ರ ಕಪ್ (ಕೆಸಿಸಿ) 2ನೇ ಆವೃತ್ತಿಯ ಟೂರ್ನಿಯಲ್ಲಿ ಗಂಗಾ ವಾರಿಯರ್ಸ್ ತಂಡದ ಪರ ಆಡಲಿದ್ದಾರೆ.

ಈ ಹಿಂದೆ ಗಂಗಾ ವಾರಿಯರ್ಸ್ ತಂಡದಲ್ಲಿದ್ದ ಯುವ ಎಡಗೈ ಸ್ಪಿನ್ನರ್ ಶುಭಾಂಗ್ ಹೆಗ್ಡೆ ಚತುಷ್ಕೋನ ಏಕದಿನ ಸರಣಿಗೆ ಭಾರತದ 19 ವರ್ಷದೊಳಗಿನವರ ಬಿ ತಂಡಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಬದಲಿ ಆಟಗಾರನಾಗಿ ಸುಚಿತ್, ಗಂಗಾ ವಾರಿಯರ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

2ನೇ ಆವೃತ್ತಿಯ ಕೆಸಿಸಿ ಕ್ರಿಕೆಟ್ ಲೀಗ್ ಟೂರ್ನಿ ಸೆಪ್ಟೆಂಬರ್ 8 ಮತ್ತು 9ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version