ದಿನದ ಸುದ್ದಿ
ವಿಡಿಯೋ | ಕೆಡಿ ಸೆಟ್ಟಲ್ಲಿ ಜೋಗಿ ಪ್ರೇಮ್ ಗೆ ಶಿಲ್ಪಾ ಶೆಟ್ಟಿ ಮಾಡಿದ್ದೇನು..?
ಸುದ್ದಿದಿನ ಡೆಸ್ಕ್ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಶೋ ಮ್ಯಾನ್ ಪ್ರೇಮ್ ಕತ್ತು ಹಿಸುಕಿ ಕೇಕೆ ಹೊಡೆದಿರೋ ಘಟನೆ ನಡೆದಿದೆ. ಕೆಡಿ ಸಿನಿಮಾದ ಮೂಲಕ ಕನ್ನಡಕ್ಕೆ ಕಂಬ್ಯಾಕ್ ಮಾಡಿರೋ ಬಾಲಿವುಡ್ ಚೆಲುವೆ ಶಿಲ್ಪಾ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು.
ಕೊನೆಯ ದಿನ ಕಾವೇರಿ ನದಿ ತೀರದಲ್ಲಿ ಕೆಡಿ ಚಿತ್ರೀಕರಣ ನಡೆದಿದ್ದು,ಸತ್ಯವತಿ ಉರುಫ್ ಶಿಲ್ಪಾ ಶೆಟ್ಟಿ ಪೋರ್ಷನ್ ಶೂಟಿಂಗ್ ಕಂಪ್ಲೀಟ್ ಆಗಿದೆ. ತಮ್ಮ ಭಾಗದ ಚಿತ್ರೀಕರಣ ಮುಗಿದಿದ್ದೇ ತಡ ಪ್ಯಾಕಪ್ ಪ್ಯಾಕಪ್ ಅಂತ ಶಿಲ್ಪಾ ಕುಣಿದಾಡಿದ್ದಾರೆ. ಇದೇ ವೇಳೆ ತಮಾಷೆ ಮಾಡುತ್ತಾ ಶೋ ಮ್ಯಾನ್ ಪ್ರೇಮ್ ಕತ್ತು ಹಿಸುಕಿ ಇವರಿಗೆ ಹಸಿವೇ ಆಗಲ್ಲ ಅನ್ಸುತ್ತೆ. ವಿತೌಟ್ ಬ್ರೇಕ್ ಕೆಲಸ ಮಾಡ್ತಾರೆ ಅದಕ್ಕೆ ಪ್ರತಿಫಲವಾಗಿ ಸಿನಿಮಾ ಅದ್ಭುತವಾಗಿ ಬಂದಿದೆ ಎಂದಿದ್ದಾರೆ.
ಜೋಗಿ ಪ್ರೇಮ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದಿರೋ ಶಿಲ್ಪಾ ಶೆಟ್ಟಿ, ಪ್ರೇಮ್ ಕಲ್ಪನೆಯಲ್ಲಿ ಅರಳಿರೋ ಸತ್ಯವತಿ ಪಾತ್ರ ನಂಗೆ ಬಹಳ ಹಿಡಿಸಿದೆ, ಕೆಡಿ ಮೇಲೆ ನಿರೀಕ್ಷೆ ಹೆಚ್ಚಿದೆ ಎಂತಲೂ ತಿಳಿಸಿದ್ದಾರೆ. ಇಡೀ ಕೆಡಿ ಟೀಮ್ ಜೊತೆ ಸಂತೋಷವಾಗಿ ಕಾಲ ಕಳೆದು ಮುಂಬೈಗೆ ವಾಪಾಸ್ ಆಗಿದ್ದಾರೆ. ಅಂದ್ಹಾಗೇ, ಕೊನೆಯ ದಿನ ಶೂಟಿಂಗ್ ಸೆಟ್‌ನಲ್ಲಿ ನಡೆದ ತರ್ಲೆ ತಮಾಷೆಯನ್ನ ವಿಡಿಯೋ ಮೂಲಕ ನಟಿ ಶಿಲ್ಪಾ ಶೆಟ್ಟಿ ತಮ್ಮ ಸೋಷಿಯಲ್ ಸೈಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ; ವಿಡಿಯೋ ನೋಡಿ
https://www.instagram.com/reel/C7l1UEfNIvA/?igsh=bDQ5NDVhMHpxYWc3
ಶಿಲ್ಪಾ ಶೆಟ್ಟಿ ಇತ್ತೀಚೆಗೆ ‘ಕೆಡಿ’ ಸಿನಿಮಾದ ಶೂಟಿಂಗ್ ಬಿಡುವಿನಲ್ಲಿ ನಂಜನಗೂಡಿನ ನಂಜುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವರಿಗೆ ಪ್ರಾರ್ಥನೆ ಸಲ್ಲಿಸಿ, ದೇವಾಲಯದ ಆವರಣದಲ್ಲಿ ಕುಳಿತು ಅವರು ಧ್ಯಾನ ಮಾಡಿದ್ದರು. ಆ ಸಂದರ್ಭದ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿದ್ದವು.
ಇದೀಗ ಕೆಡಿ ಕೊನೆಯ ದಿನದ ಶೂಟಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ‘ಪ್ರೀತ್ಸೋದ್ ತಪ್ಪಾ’, ‘ಆಟೋ ಶಂಕರ್’, ‘ಒಂದಾಗೋಣ ಬಾ’ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದ ಮಂಗಳೂರು ಚೆಲುವೆ ಇದೀಗ ಕೆಡಿ ಮೂಲಕ ಮತ್ತೊಮ್ಮೆ ಸ್ಯಾಂಡಲ್‌ವುಡ್‌ಗೆ ರೀಎಂಟ್ರಿ ಕೊಟ್ಟಿದ್ದಾರೆ.
19 ವರ್ಷಗಳ ನಂತರ ಮತ್ತೊಮ್ಮೆ ಕರುನಾಡಲ್ಲಿ ದಿಬ್ಬಣ ಹೊರಡಲಿದ್ದಾರೆ. ಕೆಜಿಎಫ್ ನಂತರ ಅಧೀರ ಸಂಜಯ್ ದತ್ತ್ ಮತ್ತೆ ಕನ್ನಡಕ್ಕೆ ಮರಳಿದ್ದಾರೆ.ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್ ಮುಂತಾದ ಕಲಾವಿದರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243