ದಿನದ ಸುದ್ದಿ
ಮೀನು ಮಾರಾಟದಿಂದ ಸುದ್ದಿಯಾದ ಹನನ್.ಗೆ ಕೇರಳ ಸಿಎಂ ಭದ್ರತೆ ಭರವಸೆ
ಸುದ್ದಿದಿನ ಡೆಸ್ಕ್
ಕೇರಳದಲ್ಲಿ ಮೀನು ಮಾರಾಟ ಮಾಡುತ್ತಿದ್ದ ಶಾಲಾ ಬಾಲಕಿಯ ವಿಡಿಯೋ ವೈರಲ್ ಆಗಿತ್ತು. ಇದರ ವಿರುದ್ಧ ಕೆಲವರು ಬಾಲಕಿಗೆ ಬೆದರಿಕೆ ಒಡ್ಡಿದ್ದವರಿಗೆ ಕೇರಳ ಮುಖ್ಯಮಂತ್ರಿ ಪಿಣಿರಾಯಿ ವಿಜಯನ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬಾಲಕಿ ಹಾನನ್ ಹಮಿದ್ ಮೇಲೆ ರೇಪ್ ಮಾಡುವುದಾಗಿ ಹೇಳಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಬಾಲಕಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಿಎಂ, ತನ್ನ ವಿದ್ಯಾಭ್ಯಾಸ ಮುಂದುವರಿಸಲು ಬಾಲಕಿ ಆದಾಯ ಮಾರ್ಗ ಕಂಡುಕೊಂಡಿದ್ದಾಳೆ. ನಿಜಕ್ಕೂ ಇದು ಶ್ಲಾಘನೀಯ ಕಾರ್ಯ. ಕಷ್ಟದ ಹಿನ್ನೆಲೆಯಿಂದ ಬಂದವರಿಗೆ ಮಾತ್ರ ಬಾಲಕಿಯ ಕಷ್ಟ ಅರ್ಥವಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಯಾರು ಬಾಲಕಿ ಗೌರವಕ್ಕೆ ಧಕ್ಕೆ ತರುತ್ತಿದ್ದಾರೋ ಅವರಿಗೆ ಬಾಲಕಿಯ ಸಾಧನೆ ಮನವರಿಕೆ ಆಗುತ್ತಿಲ್ಲ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಹನನ್ ಹಮಿದ್ ಕಾರ್ಯ ಇತರರಿಗೆ ಮಾದರಿಯಾಗಿದ್ದು, ಸರ್ಕಾರ ಬಾಲಕಿಗೆ ಭದ್ರತೆ ನೀಡುತ್ತದೆ. ಅಲ್ಲದೇ, ಸೋಷಿಯಲ್ ಮೀಡಿಯಾದಲ್ಲಿ ಹನನ್ ಮೇಲೆ ಟಾರ್ಗೆಟ್ ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷ ವಿಎಸ್ ಅಚ್ಯುತನಂದನ್ ಕೂಡ ಬಾಲಕಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಟಾರ್ಗೆಟ್ ಮಾಡಿದವರ ವಿರುಧ್ಧ ಕೇಸ್ ದಾಖಲಿಸಿಕೊಳ್ಳುವಂತೆ ಸೈಬರ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಹನನ್ ಜೀವನದ ಕಷ್ಟಗಳನ್ನು ಹೆಚ್ಚಿನ ಆತ್ಮಸ್ಥೈರ್ಯದೊಂದಿಗೆ ಎದುರಿಸುತ್ತಿದ್ದಾಳೆ. ಬಾಲಕಿಯ ಕಾಂಫಿಡೆನ್ಸ್ ಮೆಚ್ಚಲೇ ಬೇಕಾದುದು. ಅವರ ಗೌರವಕ್ಕೆ ಧಕ್ಕೆ ತರುತ್ತಿರುವ ಕೆಲಸ ಖಂಡನೀಯ. ಶಾಲೆ ಮುಗಿದ ನಂತರ ಶಾಲಾ ಸಮವಸ್ತ್ರದಲ್ಲೇ ಮೀನು ಮಾರುತ್ತಿರುವ ಸುದ್ದಿ ಮಾಧ್ಯಮಗಳಿಂದ ಬಿತ್ತರವಾಗಿದೆ. ಬಾಲಕಿಯ ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಇದೇ ವೇಳೆ ಕೆಲವರು ಇದು ಸತ್ಯಕ್ಕೆ ದೂರವಾದುದು. ತಳಬುಡವಿಲ್ಲದ್ದು ಎಂದು ಅನೇಕ ನಿಂದನೆ, ಬೆದರಿಕೆ, ಟೀಕೆಗಳು ಬಂದಿವೆ. ಆದರೆ, ಶಾಲೆ ಬಾಲಕಿ ಬಡ ಕುಟುಂಬದಿಂದ ಬಂದಿದ್ದು ವಿದ್ಯಾಭ್ಯಾಸಕ್ಕೆ ಆದಾಯ ಗಳಿಸುತ್ತಿರುವ ಶ್ಲಾಘನೀಯ ಕೆಲಸವೆಂದು ಬಾಲಕಿ ಪರ ನಿಂತಿದೆ.