ದಿನದ ಸುದ್ದಿ
ಕೇರಳ ಪ್ರವಾಹ: ಸಾವಿರಾರು ಜನರ ರಕ್ಷಿಸಿದ ಮೀನುಗಾರರಿಗೆ ಟ್ವಿಟ್ಟಿಗರ ಸೆಲೂಟ್ !
ಕೊಚ್ಚಿ: ಕಳೆದ ಎರಡು ವಾರದಿಂದ ಕೇರಳದಲ್ಲಿ ಸುರಿದ ಮಹಾಮಳೆಗೆ ಕನಿಷ್ಠ 200ಕ್ಕೂ ಹೆಚ್ಚು ಮೃತಪಟ್ಟಿದ್ದು, 10 ಲಕ್ಷಕ್ಕಿಂತಲೂ ಹೆಚ್ಚು ಜನ ಸ್ಥಳಾಂತರಗೊಂಡಿದ್ದಾರೆ.
ಈ ಶತಮಾನದ ಭೀಕರ ಮಳೆ ಎಂದು ಕರೆಯಲಾಗುತ್ತಿದ್ದು, ಕೇರಳದ ಜನ ಅಕ್ಷರಶಃ ನಲುಗಿ ಹೋಗಿದ್ದಾರೆ.
ಈ ನಡುವೆ ಕೇರಳದ ಮೀನುಗಾರರ ಕಾರ್ಯದ ಬಗ್ಗೆ ದೇಶದ ವಿವಿಧೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ
ಟ್ವಿಟರ್ ನಲ್ಲಿ ಮೀನುಗಾರರಿಗೆ ಸೆಲೂಟ್ ಅರ್ಪಿಸಲಾಗಿದೆ.
ಹೌದು, ಕೇರಳದಲ್ಲಿ ಪ್ರವಾಹ ಕಾಣಿಸಿಕೊಂಡ ಮೊದಲು ನೆರೆ ಸಂತ್ರಸ್ತರ ನೆರವಿಗೆ ಬಂದಿದ್ದು ಕೇರಳದ ನೂರಾರು ಮೀನುಗಾರರು. ಮುಳುಗಿಹೋದ ಪ್ರದೇಶಗಳಾದ ಪಥನಂತಿಟ್ಟ, ಅಲಪುಳ, ಎರ್ನಾಕುಲಂ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಜನರ ರಕ್ಷಣೆ ಕಾರ್ಯಕ್ಕೆ ಮುಂದಾಗಿದ್ದರು. ಇದರಿಂದ ಜನ ಟ್ವಿಟರ್ ನಲ್ಲಿ ಮೀನುಗಾರರನ್ನು ಸ್ಪೈಡರ್ ಮನ್ ಗಿಂತ ಮಿಗಿಲು ನಮ್ಮ ಮೀನುಗಾರರು ಎಂದು ಹೊಗಳಿದ್ದಾರೆ.