ದಿನದ ಸುದ್ದಿ
ಮೋದಿ ಕೇರಳಕ್ಕೆ 500ರೂ ಕೋಟಿ ಕೊಟ್ರು | 19,512ರೂ ಕೋಟಿ ನಷ್ಟ
ಸುದ್ದಿದಿನ ಡೆಸ್ಕ್ | ಕೇರಳದಲ್ಲಿ ಹಲವು ದಿನಗಳಿಂದ ಉಂಟಾಗಿದ್ದ ಪ್ರವಾಹದಿಂದ ರೂ 19,512 ಕೋಟಿ ನಷ್ಟವಾಗಿದೆ ಎಂದು ಕೇಂದ್ರಕ್ಕೆ ಮುಖ್ಯಮಂತ್ರಿ ಅಂದಾಜು ಪಟ್ಟಿ ಸಲ್ಲಿಸಿದ್ದು, ಕೇಂದ್ರ ಸರ್ಕಾರ ರೂ 500 ಕೋಟಿ ನೀಡಿದೆ. ಇದಕ್ಕೂ ಮೊದಲು ಕೇಂದ್ರ ಸರ್ಕಾರ ರೂ100 ಕೋಟಿ ಪರಿಹಾರ ನೀಡಿತ್ತು.
ಕೇರಳದ ಪ್ರವಾಹದಿಂದ ಮೃತ ವ್ಯಕ್ತಿಯ ಕುಟುಂಬಕ್ಕೆ ತಲಾ 2 ಲಕ್ಷ, ಗಂಭೀರ ಗಾಯಗೊಂಡವರಿಗೆ ರೂ 50,000 ಪರಿಹಾರವನ್ನು ಪ್ರಧಾನಿ ಮೋದಿ ಪಿಎಂ ಪರಿಹಾರ ನಿಧಿಯಿಂದ ಘೋಷಿಸಿದ್ದಾರೆ. ಅಧಿಕಾರಿಗಳ ಸಭೆಗೂ ಮೊದಲು ಪ್ರವಾಹ ಪರಿಸ್ಥಿತಿ ಅವಲೋಕಿಸಿದರು.