ಕ್ರೀಡೆ

ಕೇರಳ ಪ್ರವಾಹ |ಪ್ರಾಣಿಗಳ ರಕ್ಷಣೆಗೆ ಮುಂದಾದ ವಿರಾಟ್-ಅನುಷ್ಕಾ

Published

on

ಸುದ್ದಿದಿನ ಡೆಸ್ಕ್ : ಕೇರಳದ ಪ್ರವಾಹವು ಕಳೆದ ನೂರು ವರ್ಷಗಳಲ್ಲಿ ಭೀಕರ ಪ್ರವಾಹ ಎದುರಿಸಿದೆ. ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ‌ಹಲವು ಸೆಲೆಬ್ರೆಟಿಗಳು ನಿರಾಶ್ರಿತರ ನೆರವಿಗೆ ಫಣತೊಟ್ಟಿದ್ದಾರೆ. ಈ ಕಾರ್ಯಕ್ಕೆ ಈಗ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ‌ ದಂಪತಿ ಕೂಡ ಸಾಥ್ ನೀಡಿದ್ದಾರೆ.

ಸದ್ಯ ಇವರಿಬ್ಬರು ಈಗ ಇಂಗ್ಲೆಂಡ್ ನಲ್ಲಿದ್ದು, ನೆರೆ ಸಂತ್ರಸ್ತರ ಜತೆಗೆ ಪ್ರವಾಹಕ್ಕೆ ಸಿಲುಕಿರುವ ಪ್ರಾಣಿಗಳ ರಕ್ಷಣೆ ಮಾಡಲು ಫಣತೊಟ್ಟಿದ್ದಾರೆ.

ಪ್ರವಾಹದಿಂದ ಸಾವು ಬದುಕಿನ ಜತೆ ಹೋರಾಡುತ್ತಿರುವಂತಹ ಪ್ರಾಣಿಗಳಿಗೆ ಆಹಾರ-ಔಷಧಿಗಳನ್ನು ಟ್ರಕ್ ಗಳ ಮೂಲಕ ಕಳಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version