ದಿನದ ಸುದ್ದಿ
ದೇವರನಾಡು ಕೇರಳದಲ್ಲಿ ಮಹಾಮಳೆಗೆ ನಷ್ಟವಾಗಿದ್ದು ಎಷ್ಟು ಗೊತ್ತಾ?
ಸುದ್ದಿದಿನ ಡೆಸ್ಕ್ : ದೇವರನಾಡು ಕೇರಳದಲ್ಲಿ ಐದು ದಿನಗಳ ಕಾಲ ಸುರಿದ ಮಹಾ ಮಳೆಗೆ ಇಡೀ ರಾಜ್ಯ ತತ್ತರಿಸಿದ್ದು, ಒಟ್ಟು ಎಂಟೂವರೆ ಸಾವಿರ ಕೋಟಿ ನಷ್ಟವಾಗಿದೆ.
ಸಾವಿರಾರು ಮನೆಗಳು ಸಂಪೂರ್ಣ ಕುಸಿದಿದ್ದು, ಬಹುತೇಕ ರಸ್ತೆಗಳು ಜಲಾವೃತವಾಗಿವೆ. ಕೇರಳ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಸುಮಾರು 10 ಸಾವಿರ ಕಿಮೀ ರಸ್ತೆ ನೀರಿನಲ್ಲಿ ಮುಳುಗಡೆಯಾಗಿದೆ. ಬಹುತೇಕ ಕಡೆ ಗುಡ್ಡಗಳು ಕುಸಿದು ಸಂಚಾರ ಅಸ್ತವ್ಯಸ್ತವಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿ: ಕೇರಳದಲ್ಲಿ ಮುಂದುವರಿದ ಮಳೆ: ರೆಡ್ ಅಲರ್ಟ್ !
ಕೆಲವಡೆ ಮನೆಗಳು ಕುಸಿದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸದ್ಯದ ಕೇರಳದ ಪರಿಸ್ಥಿತಿಯನ್ನು ಬಿಂಬಿಸುತ್ತಿವೆ. ಮಳೆಯಿಂದ ಆದ ಅನಾಹುತದ ಪರಿಹಾರಕ್ಕೆ ಎನ್ ಎಫ್ ಜಿ ತಂಡ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಶ್ರಮಿಸುತ್ತಿವೆ. ಇನ್ನು ಕೇಂದ್ರ ಸರ್ಕಾರ ಪರಿಹಾರ ಕಾರ್ಯಕ್ಕೆ ಈವರೆಗೆ ಕೇವಲ 100 ಕೋಟಿ ಹಣ ಬಿಡುಗಡೆ ಮಾಡಿದೆ.