ದಿನದ ಸುದ್ದಿ
ವಿಡಿಯೋ | ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ ‘ಕೆಜಿಎಫ್ ನ ‘ಗಲಿಗಲಿ’ ಐಟಮ್ ಸಾಂಗ್..!
ಸುದ್ದಿದಿನ ಡೆಸ್ಕ್ : ಡಿಸೆಂಬರ್ 21 ಕ್ಕೆ ವಿಶ್ವದಾದ್ಯಂತ ತೆರೆಕಾಣಲಿರುವ ಕೆಜಿಎಫ್ ಸಿನೆಮಾ ಹಾಡುಗಳು ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿವೆ. ನಿನ್ನೆಯಷ್ಟೆ ಬಿಡುಗಡೆಯಾದ ಸಿಡಿಲ ಭರವ ಹಾಡು ಎಲ್ಲರಮೆಚ್ಚುಗೆಗೆ ಪಾತ್ರವಾಗಿದೆ.
ನಾಲ್ಕು ಭಾಷೆಯಲ್ಲಿ ಒಂದೇ ಬಾರಿಗೆ ತೆರೆಕಾಣುತ್ತಿರುವ ಈ ಸಿನೆಮಾ ವಿಶ್ವದಾದ್ಯಂತ ಪ್ರೇಕ್ಷಕರ ಕುತೂಹಲ ಹೆಚ್ಚಿಸಿರುವುದು ಕನ್ನಡದ ಹಿರಿಮೆಗೊಂದು ಗರಿಯಾಗಿದೆ.
ಈ ಹಿನ್ನಲೆಯಲ್ಲಿ ‘ಗಲಿ ಗಲಿ’ ಎಂಬ ಕೆಜಿಎಫ್ ನ ಹಿಂದಿ ಅವತರಣಿಕೆಯ ಐಟಮ್ ಸಾಂಗ್ ಯೂಟ್ಯೂಬ್ ನಲ್ಲಿ ಒಂದೇ ದಿನಕ್ಕೆ ಸುಮಾರು ಒಂದು ಕೋಟಿಗೂ ಮೀರಿ ಅಭಿಮಾನಿಗಳು ವೀಕ್ಷಿಸಿರುವುದು ಕೆಜಿಎಫ್ ನ ಮತ್ತೊಂದು ಹೆಗ್ಗಳಿಕೆಯಾಗಿದೆ.ನಿಮಗಾಗಿ ಈ ಹಾಡು.
ಸುದ್ದಿದಿನ.ಕಾಂ|ವಾಟ್ಸಾಪ್|9986715401