ದಿನದ ಸುದ್ದಿ

ಚುನಾವಣಾ ಆಯೋಗದಿಂದ ಮಾಧ್ಯಮಗಳಿಗೆ ಖಡಕ್ ಸೂಚನೆ

Published

on

ಸುದ್ದಿದಿನ,ಬೆಂಗಳೂರು: ಚುನಾವಣಾ ಆಯೋಗವು ಮೇ 7ರಂದು (ಇಂದು) ಮಾಧ್ಯಮಗಳಿಗರ ಸೂಚನೆ ನೀಡಿದೆ. ಚುನಾಣೆಯ ಅಭ್ಯರ್ಥಿಗಳು,ರಾಜಕೀಯ ಪಕ್ಷಗಳು, ಅವರಿಗೆ ಸಂಬಂಧಿಸಿದ ಜಾಹೀರಾತು, ಸಮೀಕ್ಷೆಗಳು ಹಾಗೂ ಎಕ್ಸಿಟ್ ಪೋಲ್ ವರದಿಗಳನ್ನು ಮತದಾನದ 48 ಗಂಟೆಯ ಒಳಗೆ ಪ್ರಸಾರ ವಂತಿಲ್ಲ, ಹಾಗೇನಾದರು ಪ್ರಸಾರ ಮಾಡಿದರೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿಕೊಳ್ಳಲಾಗುವುದೆಂದು ಸೂಚನೆಯಲ್ಲಿ ತಿಳಿಸಿದೆ.

ಚುನಾವಣಾ ಆಯೋಗ ಸೂಚಿಸಿರುವ ಸೂಚನೆಗಳು ಈ ಕೆಳಗಿನಂತಿವೆ

1. ಮತದಾನಕ್ಕೂ ಮೊದಲಿನ 48 ಗಂಟೆಯ ಅವಧಿಯಲ್ಲಿ ( ಮೇ 10 ರ ಸಂಜೆ 5 ಗಂಟೆಯಿಂದ ಮೇ 12 ರ ಸಂಜೆ 6.30 ರವರೆಗೆ) ಯಾವುದೇ ರಾಜಕೀಯ ಚರ್ಚೆ, ಸಮೀಕ್ಷೆ, ಅಭ್ಯರ್ಥಿಯ ಪರ/ವಿರುದ್ಧ ಸುದ್ದಿ, ಪಕ್ಷಗಳ ಪರ ವಿರುದ್ಧ ಸುದ್ದಿ ಪ್ರಸಾರ ಮಾಡುವಂತಿಲ್ಲ.

2. ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿಯ ಪರ/ವಿರುದ್ಧ ಜಾಹೀರಾತು ಪ್ರಸಾರ ಮಾಡುವಂತಿಲ್ಲ. ಮತದಾನ ದಿನ ಯಾವುದೇ ಅಭ್ಯರ್ಥಿಯ ಹೇಳಿಕೆ -ಅಭಿಪ್ರಾಯ ಪ್ರಸಾರ ಮಾಡುವಂತಿಲ್ಲ.

3. ಮತದಾನ ದಿನ ಸಂಜೆ 6.30 ರವರೆಗೆ ಯಾವುದೇ ಸಮೀಕ್ಷೆ ಪ್ರಸಾರ ಮಾಡುವಂತಿಲ್ಲ

4. ಮತದಾನ ದಿನ ಎಕ್ಸಿಟ್​ ಪೋಲ್​ಗಳನ್ನು 6.30 ರ ನಂತರ ಪ್ರಸಾರ ಮಾಡಬಹುದು.

5. ದೆಹಲಿ ಹಾಗೂ ಬೆಂಗಳೂರಿನಲ್ಲಿ ಚುನಾವಣಾ ಆಯೋಗದ ತಂಡವೂ ಮೀಡಿಯಾಗಳನ್ನು ಮಾನಿಟರ್​ ಮಾಡುತ್ತಿದ್ದು, 48 ಗಂಟೆಗಳ ಅವಧಿಯಲ್ಲಿ ನಿಯಮ ಉಲ್ಲಂಘಿಸಿದಲ್ಲಿ ಕ್ರಿಮಿನಲ್​ ಮೊಕದ್ದಮೆ ದಾಖಲಿಸಿಕೊಳ್ಳಲಿದೆ.

ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

Leave a Reply

Your email address will not be published. Required fields are marked *

Trending

Exit mobile version