ಕ್ರೀಡೆ
ಖೇಲೋ ಇಂಡಿಯಾ ಕ್ರೀಡಾಕೂಟ | 200 ಮೀಟರ್ ಬಟರ್‌ಫ್ಲೈನಲ್ಲಿ ಆರ್ಯನ್ ಪಾಂಚಾಲ್ ಚಿನ್ನದ ಪದಕ
ಸುದ್ದಿದಿನ, ಬೆಂಗಳೂರು : ಬೆಂಗಳೂರಿನಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಕ್ರೀಡಾಕೂಟದ 200 ಮೀಟರ್ ಬಟರ್‌ಫ್ಲೈನಲ್ಲಿ ಗುಜರಾತ್ ವಿಶ್ವವಿದ್ಯಾಲಯದ ಆರ್ಯನ್ ಪಾಂಚಾಲ್ ಚಿನ್ನದ ಪದಕ ಗಳಿಸಿದ್ದಾರೆ.
ಜೈನ್ ವಿಶ್ವವಿದ್ಯಾಲಯದ ರಾಜ್ ರೆಲೇಕರ್ ಎರಡನೇ ಸ್ಥಾನ ಪಡೆದರು. ಎಸ್.ಆರ್.ಎಂ. ವಿಶ್ವವಿದ್ಯಾಲಯದ ವಿಕಾಸ್ ಪ್ರಭಾಕರ್ ಮೂರನೇ ಸ್ಥಾನ ಗಳಿಸಿದ್ದಾರೆ. ಮಲ್ಲಕಂಬ ತಂಡ ಸ್ಪರ್ಧೆಯಲ್ಲಿ ಮುಂಬೈನ ವಿಶ್ವವಿದ್ಯಾಲಯ ಮೊದಲ ಸ್ಥಾನ ಗಳಿಸಿದರೆ, ಸಾವಿತ್ರಿಭಾಯಿ ಪುಲೆ ವಿಶ್ವವಿದ್ಯಾಲಯ ಮತ್ತು ಸಂತ ಗಾಡ್ಗೆ ಬಾಬಾ ಅಮರಾವತಿ ವಿಶ್ವವಿದ್ಯಾಲಯ ನಂತರದ ಸ್ಥಾನ ಗಳಿಸಿದೆ.
98ಕೆ.ಜಿ ಸೀನಿಯರ್ ಭಾರ ಎತ್ತುವ ಸ್ಪರ್ಧೆಯಲ್ಲಿ ಪುಣೆಯ ಸಾವಿತ್ರಿಭಾಯಿ ಪುಲೆ ವಿಶ್ವವಿದ್ಯಾಲಯದ ವೈಷ್ಣವ್ ಠಾಕೂರ್ ಚಿನ್ನದ ಪದಕ ಗಳಿಸಿದ್ದಾರೆ. ಸಂತ ಬಾಬಾ ಭಾಗ್‌ಸಿಂಗ್ ವಿಶ್ವವಿದ್ಯಾಲಯದ ಗುರುಪ್ರೀತ್ ರೈಹ್ 290 ಕೆ.ಜಿ ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿ ಪದಕ, ಕಳಿಂಗ ವಿಶ್ವವಿದ್ಯಾಲಯದ ಪುನೀತ್ ಚಂದ್ರ ಸಾಹು 285 ಕೆ.ಜಿ. ಭಾರ ಎತ್ತುವ ಮೂಲಕ ಕಂಚಿನ ಪದಕ ಪಡೆದಿದ್ದಾರೆ.
ಮಹಿಳೆಯರ 76 ಕೆ.ಜಿ ಸ್ಪರ್ಧೆಯಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾಲಯದ ಸ್ವಾತಿ ಕಿಶೋರ್ 188 ಕೆ.ಜಿ. ಭಾರ ಎತ್ತುವ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ. ಎಸ್‌ಕೆಎನ್ ವಿಶ್ವವಿದ್ಯಾಲಯದ ಧಾತ್ರಿ ಪಾಲಟಿ ನಂತರದ ಸ್ಥಾನ ಪಡೆದರು.
#KIUG Record Alert🚨
Men 200m Butterfly🏊🏻♀️
1. Aryan Panchal (Gujarat University) 2:04.72, #KIUG2021 Record (Old: 2:09.88, Vinayak Parihar, Bhubaneshwar, 2020)
2. Raj Relekar (Jain University) 2:09.68
3. Vikkas Prabhakar (SRM University) 2:10.53#KheloIndia pic.twitter.com/ILBv49pGo2
— Khelo India (@kheloindia) April 26, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243