ಕ್ರೀಡೆ

ಖೇಲೋ ಇಂಡಿಯಾ; 200 ಮೀಟರ್ ವೈಯಕ್ತಿಕ ಮೆಡ್ಲೆ ಈಜಿನಲ್ಲಿ ಶಿವ ಶ್ರೀಧರ್ ನೂತನ ಕೂಟ ದಾಖಲೆ

Published

on

ಸುದ್ದಿದಿನ ಡೆಸ್ಕ್ : ಬೆಂಗಳೂರಿನಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಆತಿಥೇಯ ಜೈನ್ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುತ್ತಿರುವ ಶಿವ ಶ್ರೀಧರ್ ಈಜು ವಿಭಾಗದ 200ಮೀಟರ್ ವೈಯಕ್ತಿಕ ಮೆಡ್ಲೆಯಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ.

ಮತ್ತೊಂದು ಈಜು ಸ್ಪರ್ಧೆಯಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ವರ್ಷ 400 ಮೀಟರ್ ಫ್ರೀ ಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಹಾಕಿ ಪ್ರಾಥಮಿಕ ಪಂದ್ಯದಲ್ಲಿ ಅಮೃತಸರದ ಗುರುನಾನಕ್ ದೇವ್ ವಿಶ್ವವಿದ್ಯಾಲಯ, ಉತ್ತರ ಪ್ರದೇಶದ ವಿಬಿಎಸ್ ಪೂರ್ವಾಚಲ ವಿಶ್ವವಿದ್ಯಾಲಯವನ್ನು 4-1 ಗೋಲುಗಳಿಂದ ಪರಾಭವಗೊಳಿಸಿದೆ. ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಪಗ್ವಾರಾ ಲೌಲಿ ಪ್ರೋಫೆಷನಲ್ ವಿಶ್ವವಿದ್ಯಾಲಯವನ್ನು 6-1 ಗೋಲುಗಳಿಂದ ಪರಾಭವಗೊಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version