ಕ್ರೀಡೆ
ಖೇಲೋ ಇಂಡಿಯಾ ಯುವ ಕ್ರೀಡಾಕೂಟ : 24 ಸ್ವರ್ಣ, 24 ರಜತ ಹಾಗೂ 18 ಕಂಚಿನ ಪದಕಗಳೊಂದಿಗೆ ಅಗ್ರಸ್ಥಾನದಲ್ಲಿ ಮಹಾರಾಷ್ಟ್ರ
ಸುದ್ದಿದಿನ ಡೆಸ್ಕ್ : ಪಂಚಕುಲದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯುವ ಕ್ರೀಡಾಕೂಟ-2021ರಲ್ಲಿ 24 ಸ್ವರ್ಣ, 24 ರಜತ ಹಾಗೂ 18 ಕಂಚಿನ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಮಹಾರಾಷ್ಟ್ರವು ಅಗ್ರಸ್ಥಾನದಲ್ಲಿದೆ.
ನಿನ್ನೆಯವರೆಗೆ ಮಹಾರಾಷ್ಟ್ರ ಒಟ್ಟು 66 ಪದಕಗಳನ್ನು ಗೆದ್ದುಕೊಂಡರೆ, ಹರಿಯಾಣವು 23 ಚಿನ್ನ, 20 ಬೆಳ್ಳಿ ಹಾಗೂ 29 ಕಂಚಿನೊಂದಿಗೆ ಒಟ್ಟು 72 ಪದಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಮಣಿಪುರವು 12 ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನ ಪದಕಗಳೊಂದಿಗೆ ತೃತೀಯ ಸ್ಥಾನದಲ್ಲಿದ್ದರೆ, ತಮಿಳುನಾಡು 6 ಚಿನ್ನ, 9 ಬೆಳ್ಳಿ ಹಾಗೂ 4 ಕಂಚಿನ ಪದಕ ಪಡೆದು ನಾಲ್ಕನೆಯ ಸ್ಥಾನ ತಲುಪಿದೆ. ಪಂಜಾಬ್ ರಾಜ್ಯವು 6 ಚಿನ್ನ, 4 ಬೆಳ್ಳಿ ಹಾಗೂ 6 ಕಂಚಿನ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ.
The intensity and power that Kiran (#Rajasthan) generates and her celebration can be felt as she wins the women's #DiscusThrow gold 🥇 with a personal best effort of 48.21m#KIYG2021 #KheloIndia #UmeedSeYakeenTak@ddsportschannel @Dream11 pic.twitter.com/SpaqXgkbJA
— Khelo India (@kheloindia) June 8, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243