ದಿನದ ಸುದ್ದಿ

ದಾವಣಗೆರೆ | ಕ್ರೀಡಾ ವಸತಿ ನಿಲಯದ ಖೋ-ಖೋ ತಂಡಕ್ಕೆ ಬೆಳ್ಳಿಪದಕ

Published

on

ಸುದ್ದಿದಿನ,ದಾವಣಗೆರೆ:ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಅಕ್ಟೋಬರ್ 3 ರಿಂದ 6 ರವರೆಗೆ ನಡೆದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ಖೋ-ಖೋ ಪಂದ್ಯಾವಳಿಯಲ್ಲಿ ನಗರದ ಕ್ರೀಡಾ ವಸತಿ ನಿಲಯದ ಪುರುಷರ ಖೋ-ಖೋ ತಂಡವು ಬೆಳ್ಳಿ ಪದಕ ಪಡೆದಿದೆ.

ತಂಡದಿಂದ ಗಗನ್, ಸಿದ್ಧರೂಢ, ಶರತ್, ಅರ್ಜುನ, ಮಹಮ್ಮದ್ ತಾಸೀನ್, ನಾಗರಾಜ, ರಾಜು, ಧನರಾಜ್, ಆಸೀಫ್, ಷರೀಫ್, ಲಕ್ಷ್ಮಣ ಹಾಗೂ ಲಂಕೇಶ ಇವರುಗಳು ಉತ್ತಮ ಪ್ರದರ್ಶನ ನೀಡಿರುತ್ತಾರೆ. ತಂಡದ ತರಬೇತುದಾರರಾಗಿ ರಾಮಲಿಂಗಪ್ಪ.ಜೆ, ತಂಡದ ವ್ಯವಸ್ಥಾಪಕರಾಗಿ ರವಿ.ಕೆ ಇವರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version