ಸಿನಿ ಸುದ್ದಿ

ಕನ್ನಡವನ್ನ ಕಿತ್ತುಕೊಳ್ಳೋ ಧೈರ್ಯ ಯಾರಿಗಿದೆ..? ಕನ್ನಡ ಉಳಿಸಿ ಅನ್ನಬೇಡಿ, ಕನ್ನಡ ಬೆಳೆಸಿ ಎನ್ನಿ : ಕನ್ನಡ ಪರ ಹೋರಾಟಗಾರರಿಗೆ ಕಿಚ್ಚನ ಸಲಹೆ

Published

on

ಸುದ್ದಿದಿನ, ಬೆಂಗಳೂರು : ಸಂಘಟನೆಯವರ ಹಿಂದೆ ನೂರಾರು ಜನ ಬರ್ತೀರಾ, ಆದರೆ ನಮ್ಮಂಥ ಕಲಾವಿದರಿಗೆ ಅಭಿಮಾನಿಗಳಷ್ಟೇ. ಅವರು ರಾಜ್ಯದ ಮೂಲೆಗಳಲ್ಲಿ ಇರ್ತಾರೆ. ನೀವು ನಮ್ಮನ್ನೆನ್ನಾದ್ರೂ ಹೊಡೆಯೋಕೆ ಬಂದ್ರೆ ನಾವೊಬ್ಬರೇ ಸಿಕ್ತೀವಿ. ಹಾಗಾಗಿ ಕೆಲವರು ಏನಾದರೂ ಸ್ಟೆಪ್ಸ್ ತೆಗೆದುಕೊಂಡಾಗ ಸ್ವಲ್ಪ ಯೋಚಿಸಿ ಎಂದು ಕನ್ನಡಪರ ಹೋರಾಟಗಾರರಿಗೆ ಕಿಚ್ಚ ಸುದೀಪ್ ಸಲಹೆ ನೀಡುವ ಮೂಲಕ ಗಮನಸೆಳೆದಿದ್ದಾರೆ.

ರಾಮನಗರ ಜಿಲ್ಲೆ ಬಿಡದಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಮಾತನಾಡಿದರು. ಬುರ್ಜ್ ಕಲೀಫಾದಲ್ಲಿ ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ಜತೆಗೆ ಕನ್ನಡದ ಬಾವುಟ ಪ್ರದರ್ಶನ ಕಂಡ ಹಿನ್ನೆಲೆ ಕಿಚ್ಚ ಸುದೀಪ್ ಅವರಿಗೆ ಕನ್ನಡಪರ ಹೋರಾಟಗಾರರು ಸನ್ಮಾನವನ್ನು ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಡಿದರು.

ಇದನ್ನೂ ಓದಿ | ಪಡಿತರ ಚೀಟಿದಾರರು ಕೂಡಲೇ ಇ-ಕೆವೈಸಿ ಆಧಾರ್ ಬಯೋ ದೃಢೀಕರಣ ಮಾಡಿಸಿಕೊಳ್ಳಿ

ನಮ್ಮಲ್ಲಿ ಕನ್ನಡದ ವಿಚಾರವಾಗಿ ಯಾವುದೇ ಗೊಂದಲವಿಲ್ಲ. ಆದರೆ ಕನ್ನಡ ಪರವಾಗಿ ಇರುವ ಕೆಲ ಕನ್ನಡಪರ ಸಂಘಟನೆಗಳಲ್ಲಿಯೇ ಗೊಂದಲವಿದ್ದು, ನೀವು ಮೊದಲು ನಿಮ್ಮ ಗೊಂದಲವನ್ನ ಸರಿಪಡಿಸಿಕೊಳ್ಳಿ. ಕನ್ನಡದ ಶಾಲು ಹಾಕಿ ನೀವು ಮನೆಗೆ ಬಂದರೆ ಖುಷಿ ಪಡೋದಾ, ಭಯ ಪಡೋದಾ ಗೊತ್ತಾಗಲ್ಲ ನನಗೆ. ಜೊತೆಗೆ ನನಗೆ ಉಗಿಯೋಕೆ ಬಂದಿದ್ದಾರೋ ಅಥವಾ ಹೊಗಳೋಕೆ ಬಂದಿದಿರೋ ಅಂತಾನೂ ಗೊತ್ತಾಗಲ್ಲ ಎಂದರು.

ಕನ್ನಡವನ್ನ ಉಳಿಸಿ ಎಂದು ಹೇಳ್ತೀರಾ ಅದು ತಪ್ಪು. ಯಾಕೆಂದರೆ ಕನ್ನಡವನ್ನ ಕಿತ್ತುಕೊಂಡವರು ಯಾರು..? ಯಾರಿಗಿದೆ ಆ ಧೈರ್ಯ..? ಎಂದು ಕಿಚ್ಚ ಗುಡುಗಿದರು. ಜೊತೆಗೆ ಕನ್ನಡಕ್ಕೆ ಇರುವ ಇತಿಹಾಸ ಬೇರೆ ಯಾವ ಭಾಷೆಗೂ ಇಲ್ಲ. ಹಾಗಾಗಿ ಯಾವನಿಗಿದೆ ಕನ್ನಡವನ್ನ ಕಿತ್ತುಕೊಳ್ಳುವ ತಾಕತ್ತು, ಬರೋಕೆ ಹೇಳಿ.

ಆದರೆ ಇಲ್ಲಿ ಬೇರೆ ಭಾಷೆ ಜಾಸ್ತಿಯಾಗಿರೋದಕ್ಕೆ ಕಾರಣ ನೀವೇ ಯೋಚಿಸಿ, ಅರ್ಥ ಸಿಗಲಿದೆ. ಕನ್ನಡದ ಮೇಲೆ ಅಭಿಮಾನ ಇಲ್ಲಾಂದ್ರೆ ಬಿಟ್ಟಾಕಿ ಅವರನ್ನ. ಅಭಿಮಾನ ಇರೋರನ್ನ ಗುರುತಿಸಿ ಬೆಳೆಸಿ. ಕನ್ನಡ ಉಳಿಸಿ ಅನ್ನಬೇಡಿ, ಕನ್ನಡ ಬೆಳೆಸಿ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version