ಸಿನಿ ಸುದ್ದಿ

ವಿಡಿಯೋ | ಅಭಿಮಾನಿಯ ಹುಟ್ಟು ಹಬ್ಬಕ್ಕೆ ‘ಪಿಯಾನೋ’ ನುಡಿಸಿದ ಕಿಚ್ಚ ಸುದೀಪ

Published

on

ಸುದ್ದಿದಿನ,ಬೆಂಗಳೂರು: ನಟ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದು, ತಮ್ಮ ಆಪ್ತ ನಟ, ನಟಿಯರು, ತಂತ್ರಜ್ಞರ ಜನ್ಮದಿನದ ಸಂದರ್ಭದಲ್ಲಿ ವಿಶೇಷವಾಗಿ ಶುಭಾಶಯ ಕೋರುತ್ತಾರೆ. ಇದೀಗ ತಮ್ಮ ಆಪ್ತ ಸಹಾಯಕರೊಬ್ಬರ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರುವ ಮೂಲಕ ಸುದೀಪ್ ಗಮನ ಸೆಳೆದಿದ್ದಾರೆ.

ನಟ ಸುದೀಪ್ ತಮ್ಮ ಆಪ್ತ ಸಹಾಯಕ ಮಹದೇವ್ ಅವರ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ. ಮಹದೇವ್ ಹುಟ್ಟುಹಬ್ಬ ಮೇ 31ರಂದು ಇತ್ತು. ಅಂದು ಸುದೀಪ್ ಪಿಯಾನೋ ನುಡಿಸುವ ಮೂಲಕ ಮಹದೇವ್‍ಗೆ ಬರ್ತ್ ಡೇ ಶುಭಾಶಯ ತಿಳಿಸಿದ್ದಾರೆ. ಈ ವಿಡಿಯೋವನ್ನು ಸುದೀಪ್ ಟ್ವಿಟ್ಟರಿನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಮೊದಲಿಗೆ ವಿಡಿಯೋದಲ್ಲಿ ಸುದೀಪ್, ಈಗ ನಾನು ಏನೋ ಪ್ಲೇ ಮಾಡುತ್ತಿದ್ದೀನಿ. ನನಗೆ ಬೇಕಾಗಿರುವ, ನನ್ನೊಟ್ಟಿಗಿರುವ ಮಹದೇವ್ ಹುಟ್ಟುಹಬ್ಬ. ನಮ್ಮ ಮಹದೇವ್‍ಗೋಸ್ಕರ ಇದು ಎಂದು ಸುದೀಪ್, ಕೀಬೋರ್ಡ್ ನಲ್ಲಿ ‘ಹ್ಯಾಪಿ ಬರ್ತ್ ಡೇ ಟೂ ಯೂ’ ಟ್ಯೂನ್ ನುಡಿಸಿದ್ದಾರೆ.

ಈ ವಿಡಿಯೋದಲ್ಲಿ ಸುದೀಪ್ ಪಕ್ಕದಲ್ಲಿಯೇ ಮಹದೇವ್ ನಿಂತಿರುವುದನ್ನು ಕಾಣಬಹುದಾಗಿದೆ. ಕೀ ಬೋರ್ಡ್ ನುಡಿಸಿದ ಬಳಿಕ ಸುದೀಪ್, ‘ಹ್ಯಾಪಿ ಬರ್ತ್ ಡೇ ಮಹದೇವ್’ ಎಂದು ಅವರನ್ನು ಶುಭಾಶಯ ಕೋರಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಡಿಯೋ ನೋಡಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version