ದಿನದ ಸುದ್ದಿ
ದಾವಣಗೆರೆ : ಹೆಚ್.ಪಿ. ಪೆಟ್ರೋಲ್ ಸೇಲ್ಸ್ ಗಳಲ್ಲಿ ‘ಕೆ.ಎಂ.ಫ್ ಹಾಲಿನ ಉತ್ಪನ್ನಗಳ ಮಾರಾಟ ಮಳಿಗೆ’
ಸುದ್ದಿದಿನ ಡೆಸ್ಕ್ : ಹೆಚ್.ಪಿ. ಪೆಟ್ರೋಲ್ ಸೇಲ್ಸ್ ರಿಟೇಲ್‍ಗಳಲ್ಲಿ ಕೆಎಂಎಫ್‍ನಿಂದ ಹಾಲಿನ ಉತ್ಪನ್ನ ಮಾರಾಟ ಮಳಿಗೆ ಆರಂಭಿಸಲಾಗುತ್ತಿದ್ದು, ಶನಿವಾರ ಪ್ರಾಯೋಗಿಕವಾಗಿ ದಾವಣಗೆರೆಯ ಶಾಮನೂರು ರಸ್ತೆಯ ತೃಪ್ತಿ ಪೆಟ್ರೋಲ್ ಮಾರಾಟ ಕೇಂದ್ರದಲ್ಲಿ ಆರಂಬಿಸಲಾಯಿತು.
ಕೆಎಂಎಫ್‍ನ ಹಾಲಿನ ಉತ್ಪನ್ನ ಮಾರಾಟ ಮಳಿಗೆಯನ್ನು ಉದ್ಘಾಟಿಸಿದ ಹೆಚ್.ಪಿ. ಕಂಪನಿ ಚೀಫ್ ರಿಜನಲ್ ಮ್ಯಾನೇಜರ್ ಶ್ರೀ ಆರ್.ರಾಜೇಂದ್ರಬಾಬು ಅವರು ಹೆಚ್.ಪಿ. ಪೆಟ್ರೋಲ್ ಸೇಲ್ಸ್ ರಿಟೇಲ್‍ಗಳಲ್ಲಿ ಇಂತಹ ಕೇಂದ್ರಗಳನ್ನು ಆರಂಭಿಸುವ ಮೂಲಕ ರೈತರಿಗೂ ಹಾಗೂ ನಮ್ಮ ಕಂಪನಿಯ ಗ್ರಾಹಕರಿಗೂ ಅನುಕೂಲ ಕಲ್ಪಿಸಲಾಗುವುದು ಎಂದರು.
ಹೆಚ್.ಪಿ. ಕಂಪನಿಯ ಗ್ರಾಹಕರು ಡಿಜಿಲೀಕರಣ ವ್ಯವಹಾರಕ್ಕ್ಕೆ ಒತ್ತು ನೀಡಿ ಕಂಪನಿ ನೀಡುವ ಸೇವೆಗಳ ಅನುಕೂಲ ಪಡೆಯಲಿ ಎಂದು ತಿಳಿಸಿದರು. ಮಾರಾಟಾಧಿಕಾರಿ ಶ್ರೀ ಡಿ.ಸತೀಶ್ ಕುಮಾರ್ ಮಾತನಾಡಿ ಸೆಪ್ಟಂಬರ್‍ನಿಂದ ಹೆಚ್.ಪಿ. ಕಂಪನಿ ಡಿಜಿಲೀಕರಣ ವ್ಯವಹಾರವನ್ನು ಗ್ರಾಹಕರಿಗೆ ವಿಸ್ತರಿಸಿದ್ದು, ಗ್ರಾಹಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕೆಎಂಎಫ್‍ನ ಮಾರುಕಟ್ಟೆ ವ್ಯವಸ್ಥಾಪಕ ಡಾ. ಕೆ.ಎಂ.ಲೋಹಿತಾಶ್ವರ ಅವರು ಮಾತನಾಡಿ ಕೆಎಂಎಫ್‍ನಿಂದ ರಾಜ್ಯದ ರೈತರಿಗೆ ಅನುಕೂಲವಾಗಿದ್ದು, ಪ್ರತಿದಿನ ರೈತರಿಂದ ಸುಮಾರು 80 ಲಕ್ಷ ಲೀಟರ್ ಹಾಲು ಖರೀದಿಸಿ 40 ಲಕ್ಷ ಲೀಟರ್‍ಗಳನ್ನು ಮಾರಾಟ ಮಾಡಿ ಇನ್ನುಳಿದ ಹಾಲಿನಲ್ಲಿ ವಿವಿಧ ಹಾಲಿನ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ ಎಂದರು.
ಪೆಟ್ರೋಲ್ ವಿತರಕರ ಸಂಘದ ದಾವಣಗೆರೆ ಜಿಲ್ಲಾಧ್ಯಕ್ಷ ಶ್ರೀ ಕಿರಣ್ ವಾಲವಾಲ್ಕರ್, ತೃಪ್ತಿ ಪೆಟ್ರೋಲ್ ಬಂಕ್‍ನ ಮಾಲೀಕರಾದ ಶ್ರೀ ಶಶಿಕಾಂತ್, ಶ್ರೀ ಶೈಲ ಪೆಟ್ರೋಲ್ ಬಂಕ್‍ನ ಮಾಲೀಕರಾದ ಶ್ರೀ ಚಂದ್ರಶೇಖರ್ ತುರ್ಚಘಟ್ಟ, ಶ್ರೀ ಪ್ರಕಾಶ್ ಬಾಡ, ಹರೀಶ್ ಹರಿಹರ, ಶ್ರೀ ಶರತ್ ವಾಲಾವಲ್ಕರ್, ಶ್ರೀ ಪ್ರಕಾಶ್ ಮಲೆಬೇನ್ನೂರು, ಶ್ರೀ ವಿರೇಶ್, ಶ್ರೀ ಗಣೇಶ್, ಶ್ರೀ ಮಲ್ಲಿಕಾರ್ಜುನ್,ಶ್ರೀ ಜ್ಯೋತಿಪ್ರಕಾಶ್, ಶ್ರೀ ಸತೀಶ್, ಶ್ರೀ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401