ಲೈಫ್ ಸ್ಟೈಲ್
‘ಅವರೆಕಾಳು ಕೋಡುಬಳೆ’ ಹೀಗೆ ಮಾಡಿ ; ಬಾಯ್ಚಪ್ಪರಿಸಿ ತಿನ್ನಿ..!
ಈಗ ಚಳಿಗಾಲ ಬರುತ್ತಿದೆ. ಜೊತೆಗೆ ಅವರೆಕಾಯಿಯ ಕಾಲ ಬೇರೆ ಇದು .ಈ ಚಳಿಗಾಲದಲ್ಲಿ ಸಂಜೆ ಸಮಯದಲ್ಲಿ ಬಿಸಿ ಬಿಸಿಯಾಗಿ ಏನಾದರೂ ಟೀ ಕಾಫಿ ಜೊತೆಗೆ ಇದರೆ ಎಷ್ಟು ಚಂದ ಅಲ್ವಾ. ಅದಕ್ಕಾಗಿ ನೀವು ಅವರೆಕಾಳಿನ ಕೋಡು ಬಳೆ ಮಾಡಿ ಸವಿಯಬಹುದು.
ಇಲ್ಲಿದೆ ನೋಡಿ ಬೇಗ, ಬಿಸಿ ಬಿಸಿ,ಹಾಗೂ ಗರಿ ಗುರಿಯಾಗಿ,ರುಚಿಕರವಾಗಿ ಮಾಡಬಹುದಾದ ಚಿಲ್ಕವರೆ ಕಾಳಿನ ಕೋಡುಬಳೆ.
ಬೇಕಾದ ಸಾಮಗ್ರಿಗಳು
- ಚಿಲ್ಕಿದ ಅವರೆಕಾಳು- 1 ಪಾವು
- ದಪ್ಪ ಈರುಳ್ಳಿ- 2
- ಅಕ್ಕಿ ಹಿಟ್ಟು- 2 ಹಿಡಿ
- ಕರಿಬೇವು ಸ್ವಲ್ಪ
- ಕಾರದ ಪುಡಿ
- ಸೋಡಾ ಪುಡಿ
- ಉಪ್ಪು
ಮಾಡುವ ವಿಧಾನ
ಚಿಲ್ಕವರೆ ಅನ್ನು ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಬೇಕು. ನಂತರ ನೀರು ಸೊಸಿ ಅದನ್ನು ಸ್ವಲ್ಪ ಸ್ಮಾಶ್ ಮಾಡಿ ಇದಕ್ಕೆ ಸಣ್ಣಗೆ ಎಚ್ಚಿದ ಈರುಳ್ಳಿ, ಕರಿಬೇವು, ಅಕ್ಕಿ ಹಿಟ್ಟು, ಕಾರದ ಪುಡಿ ,ಚಿಟಕಿ ಹಿಂಗು, ರುಚಿಗೆ ತಕ್ಕಷ್ಟು ಉಪ್ಪು. ಎಲ್ಲವನ್ನೂ ಸೇರಿಸಿ ಕಲಸಿ , ಕೋಡುಬಳೆ ಹದಕ್ಕೆ ಕಲಸಿ, ಚಿಕ್ಕ ಚಿಕ್ಕ ಕೋಡುಬಳೆ ಅಕಾರ ಮಾಡಿ, ಕಾದಿರುವ ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೂ ಕರಿಯ ಬೇಕು. ಈಗ ರುಚಿಯಾದ ಅವರೆ ಕೊಡಬಳೆ ಸಿದ್ಧ. ಇದನ್ನು ಬಿಸಿಯಲ್ಲೆ ತಿನ್ನದರೆ ಚಂದ.