ಕ್ರೀಡೆ
ನಾಟಿಂಗ್ ಹ್ಯಾಮ್ ಟೆಸ್ಟ್ ಗೆಲುವನ್ನು ‘ಕೇರಳ ಸಂತ್ರಸ್ತರಿಗೆ ‘ಅರ್ಪಿಸಿದ ಕೊಹ್ಲಿ
ಸುದ್ದಿದಿನ, ನಾಟಿಂಗ್ ಹ್ಯಾಮ್: ಇಲ್ಲಿ ಬುಧವಾರ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧದ 3 ನೇ ಟೆಸ್ಟ್ ಪಂದ್ಯದಲ್ಲಿ 203 ರನ್ ಗಳ ಅಂತರದಲ್ಲಿ ಭಾರತ ಜಯಭೇರಿ ಬಾರಿಸಿತು. ಈ ಗೆಲುವನ್ನು ನಾಯಕ ವಿರಾಟ್ ಕೊಹ್ಲಿ, ಕೇರಳದ ನೆರೆ ಸಂತ್ರಸ್ತರಿಗೆ ಅರ್ಪಿಸಿದ್ದಾರೆ.
5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-2 ರಿಂದ ಹಿನ್ನಡೆ ಅನುಭವಿಸಿದೆ. ಆದರೂ ಸರಣಿ ಜೀವಂತವಾಗಿದೆ. ಈ ಪಂದ್ಯ ಭಾರತದ ಪಾಲಿಗೆ ಮಾಡು ಇಲ್ಲವೇ ಮಡಿ ಅಂತಾಗಿತ್ತು. ಇಂಗ್ಲೆಂಡ್ ಈಗಾಗಲೇ ಮೊದಲೆರಡು ಪಂದ್ಯಗಳನ್ನು ಗೆದ್ದಿತ್ತು. ಒಂದೊಮ್ಮೆ ಈ ಪಂದ್ಯ ಇಂಗ್ಲೆಂಡ್ ಪಾಲಾಗಿದ್ದರೆ, ಭಾರತದ ಸರಣಿ ಗೆಲುವಿನ ಆಸೆ ಮರೀಚಿಕೆ ಯಾಗುತ್ತಿತ್ತು. 3 ನೇ ಪಂದ್ಯವನ್ನು ಜಯಿಸುವ ಮೂಲಕ ಸರಣಿಯನ್ನು ಜೀವಂತವಾಗಿರಿಸಿದೆ. ಇನ್ನೂ 2 ಟೆಸ್ಟ್ ಪಂದ್ಯಗಳಲ್ಲಿ ಭಾರತ ಇಂತಹದ್ದೇ ಪ್ರದರ್ಶನ ತೋರಿದ್ದೆ ಆದಲ್ಲಿ ಕೊಹ್ಲಿ ಪಡೆಗೆ ಸರಣಿ ಕಟ್ಟಿಟ್ಟ ಬುತ್ತಿ ಎನ್ನುವಂತಾಗಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401