ಕ್ರೀಡೆ
ಅನುಷ್ಕಾಗೆ ಪ್ಲೈನ್ ಕಿಸ್ ನೀಡಿದ ಕೊಹ್ಲಿ
ಸುದ್ದಿದಿನ ಡೆಸ್ಕ್ | 3 ನೇ ಟೆಸ್ಟ್ ಪಂದ್ಯದ 2 ನೇ ಇನ್ನಿಂಗ್ಸ್‌ನಲ್ಲಿ 23 ನೇ ಶತಕ ಸಿಡಿಸಿದ ಬಳಿಕ, ವಿರಾಟ್ ಕೊಹ್ಲಿ ಗ್ಯಾಲರಿಯಲ್ಲಿ ದ್ದ ಪತ್ನಿ ಅನುಷ್ಕಾ ಶರ್ಮಾ ಗೆ ಗಾಳಿಯಲ್ಲಿ ಮತ್ತು ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಅನುಷ್ಕಾ ಕೂಡ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಕೊಹ್ಲಿ ಅವರ ಶತಕದ ಸಾಧನೆಗೆ ಅಭಿನಂದನೆ ತಿಳಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಕೊಹ್ಲಿ (97) ಶತಕದ ಹೊಸ್ತಿಲಲ್ಲಿ ಎಡವಿದ್ದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಆ ತಪ್ಪು ಮಾಡಲಿಲ್ಲ. 2 ನೇ ಇನ್ನಿಂಗ್ಸ್‌ನಲ್ಲಿ ಮೊದಲ 50 ರನ್ ಗಳಿಸಲು 74 ಎಸೆತಗಳನ್ನು ತೆಗೆದುಕೊಂಡಿದ್ದ ಕೊಹ್ಲಿ ಇನ್ನುಳಿದ 50 ರನ್ ಗಳಿಸಲು 123 ಎಸೆತಗಳನ್ನು ತೆಗೆದುಕೊಂಡರು. ಇದು ಟೆಸ್ಟ್ ನಲ್ಲಿ ಕೊಹ್ಲಿಯ 4 ನೇ ನಿಧಾನಗತಿಯ ಶತಕವಾಗಿದೆ.