/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಕ್ರೀಡೆ

ಕೆಪಿಎಲ್ 2018 ಹರಾಜು ಪ್ರಕ್ರಿಯೆ | ಕುತೂಹಲ ಮೂಡಿಸಿದ ಆಟಗಾರರು..!

Published

on

ಸುದ್ದಿದಿನ, ಬೆಂಗಳೂರು | ರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ 7 ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಕುತೂಹಲಗಳೊಂದಿಗೆ ಮುಕ್ತಾಯಗೊಂಡಿದೆ. ವೇಗಿ ಅಭಿಮನ್ಯು ಮಿಥುನ್ ಗರಿಷ್ಠ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಹಾಗೇ ಇನ್ನೂ ಹಲವು ಆಟಗಾರರು ತಮ್ಮ ಮೂಲ ಬೆಲೆಯನ್ನೇ ಉಳಿಸಿಕೊಂಡು ಹರಾಜಾಗುವ ಮೂಲಕ ಅಚ್ಚರಿಗೊಳಿಸಿದ್ದಾರೆ.

ಐಪಿಎಲ್ ಟೂರ್ನಿ, ಇಂಡಿಯಾ ಎ ಹಾಗೂ ರಣಜಿ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದ ಮಯಾಂಕ್ ಅಗರ್ವಾಲ್, ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಮಿಂಚಿನ ಪ್ರದರ್ಶನ ನೀಡಿದ ಕೆ ಗೌತಮ್, ಕೆಕೆಆರ್ ತಂಡದಲ್ಲಿ ಮಿಂಚಿದ ಪ್ರಸಿದ್ ಕೃಷ್ಣ ಸೇರಿದಂತೆ ಹಲವು ಆಟಗಾರರನ್ನ ಆರಂಭದಲ್ಲಿ ಯಾವ ಫ್ರಾಂಚೈಸಿ ಕೂಡ ಖರೀದಿಸಲೇ ಇಲ್ಲ.

ಅಂತಿಮ ಹಂತದಲ್ಲಿ ಮಯಾಂಕ್, ಕೆ ಗೌತಮ್ ಸೇರಿದಂತೆ ಕೆಲ ಪ್ರಮುಖ ಆಟಗಾರರು ಮೂಲ ಬೆಲೆಗೆ ಹರಾಜಾಗಿ ಅಚ್ಚರಿ ಮೂಡಿಸಿದರು. ಆದರೆ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರನ್ನ ಯಾವ ಫ್ರಾಂಚೈಸಿ ಕೂಡ ಖರೀದಿಸಲೇ ಇಲ್ಲ. ಹೀಗಾಗಿ ಶ್ರೇಯಸ್ ಗೋಪಾಲ್ ಅನ್‌ಸೋಲ್ಡ್ ಆಗಿ ಉಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986815401

Leave a Reply

Your email address will not be published. Required fields are marked *

Trending

Exit mobile version