ಕ್ರೀಡೆ

ದಾವಣಗೆರೆ | ರೋಚಕ ಹಣಾಹಣೆಯಲ್ಲಿ ಗೆದ್ದು ಬೀಗಿದ ಪವರ್ ಫೈಟರ್ಸ್

Published

on

ಸುದ್ದಿದಿನ,ದಾವಣಗೆರೆ: ನಗರದ ಹಳೇ ಕುಂದುವಾಡದಲ್ಲಿ ನಡೆದ ಕುಂದುವಾಡ ಪ್ರೀಮಿಯರ್ ಲೀಗ್ ನ ಫೈನಲ್ ಪಂದ್ಯದಲ್ಲಿ‌ ರೋಚಕ ಹಣಾಹಣೆಯಲ್ಲಿ ಟೀಮ್ ಖುಷಿ ಕ್ರಿಕೆಟರ್ಸ್ ತಂಡದ ವಿರುದ್ದ ಪವರ್ ಫೈಟರ್ಸ್ ತಂಡ ಗೆಲುವು ಪಡೆಯಿತು..

ನಗರದ ಹಳೇ ಕುಂದುವಾಡ ಶಿಬಾರ ಸ್ಟೇಡಿಯಂ ನಲ್ಲಿ ಮನಾ ಯುವ ಬ್ರಿಗೇಡ್, ಜರವೇ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ಕಾಲ ಐಪಿಎಲ್ ಮಾದರಿಯಲ್ಲಿ ಕುಂದುವಾಡ ಪ್ರೀಮಿಯರ್ ಲೀಗ್ ಹಮ್ಮಿಕೊಳ್ಳಲಾಗಿತ್ತು. ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸಿದ್ದವು, ಫೈನಲ್ ಗೆ ಪವರ್ ಫೈಟರ್ಸ್ ಹಾಗೂ ಟೀಮ್ ಖುಷಿ ಕ್ರಿಕೇಟರ್ಸ್ ಅರ್ಹತೆ ಪಡೆದಿದ್ದವು.. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪವರ್ ಫೈಟರ್ಸ್ 3 ಓವರ್ ಮುಕ್ತಾಯಕ್ಕೆ ಕೇವಲ 18 ರನ್ ಪೇರಿಸಿತು, ಆದರೂ ಸಹ ಪಂದ್ಯ ಬಿಟ್ಟು ಕೊಡದೇ ಬಿಗಿ ಬೌಲಿಂಗ್ ದಾಳಿ ನಡೆಸಿತು, ಕೊನೆಯ ಓವರ್ ನಲ್ಲಿ 13 ರನ್ ಅವಶ್ಯತೆ ಬಿದ್ದಾಗ ಪಂದ್ಯ ರೋಚಕತೆಗೆ ತಿರುಗಿತು, ಕೊನೆಯ ಎಸೆತದಲ್ಲಿ ಆರು ರನ್ ಬೇಕಿದ್ದಾಗ ಕೇವಲ ಒಂದು ರನ್ ಪಡೆದು ಐದು ರನ್ ಗಳಿಂದ ಟೀಮ್ ಖುಷಿ ಕ್ರಿಕೇಟರ್ಸ್ ಸೋಲನ್ನು ಒಪ್ಪಿಕೊಂಡಿತು.‌ ಇದರೊಂದಿಗೆ ಕೆಪಿಎಲ್ ನಾಲ್ಕನೇ ಆವೃತ್ತಿಯಲ್ಲಿ ಪವರ್ ಫೈಟರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು, ರನ್ನರ್ ಆಗಿ ಟೀಮ್ ಖುಷಿ‌ ಕ್ರಿಕೆಟರ್ಸ್, ತೃತೀಯ ಸ್ಥಾನ ಇಲೆವೆನ್ ಸೋಲ್ಡಜರ್ಸ್ ತಂಡ ಪಡೆಯಿತು..

ಇನ್ನೂ‌ ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪಂದ್ಯಾವಳಿ ಉದ್ಘಾಟಿಸಿದರು. ಈ ವೇಳೆ ಬ್ರಿಡ್ಜ್ ನಿರ್ಮಿಸಿ ಕೊಡುವಂತೆ ಮನಾ ಯುವ ಬ್ರಿಗೇಡ್ ನಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮೂರನೇ ದಿನದಲ್ಲಿ ಪಾಲಿಕೆ ಸದಸ್ಯರ ತಂಡ ಹಾಗೂ ಪತ್ರಕರ್ತರ ತಂಡಗಳ ನಡುವೆ ಅಫಿಶೀಯಲ್ ಕ್ರಿಕೆಟ್ ಆಯೋಜನೆ ಮಾಡಲಾಗಿತ್ತು. ಈ ಪಂದ್ಯವು ರೋಚಕ ಹಣಾಹಣೆ ನಡೆದು ಪತ್ರಕರ್ತರ ತಂಡ ಕೇವಲ ಐದು ರನ್ ನಿಂದ ಸೋಲು ಕಂಡಿತು. ಮೇಯರ್ ಎಸ್ ವೀರೇಶ್ ಅವರು ಮೊದಲ ಬ್ಯಾಟಿಂಗ್ ಇಳಿದು ಉತ್ತಮ ಆರಂಭ ಒದಗಿಸಿ ಕೊಟ್ಟರು.. ದೂಡ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್ ಬ್ಯಾಟಿಂಗ್ ಮಾಡುವ ಅಫಿಶೀಯಲ್ ಪಂದ್ಯಾವಳಿ ಉದ್ಘಾಟಿಸಿದರು, ಇದೇ ವೇಳೆ ಸಿಎ ಸೈಟ್ ನಲ್ಲಿ ಹಳೇ ಕುಂದುವಾಡದಲ್ಲಿ ಮೈದಾನ ನಿರ್ಮಿಸಿಕೊಡುವಂತೆ ದೂಡ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರಿಗೆ ಮನಾ ಯುವ ಬ್ರಿಗೇಡ್ ವತಿಯಿಂದ ಮನವಿ ಸಲ್ಲಿಸಲಾಯಿತು.

ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಹಾದು ಹೋಗುತ್ತಿದ್ದ ಲಿಂಗಾಯಿತ ಪಂಚಮಸಾಲಿ ಮಠದ ಶ್ರೀ ವಚನಾನಂದ ಸ್ವಾಮಿಜಿ ಅವರು, ಮೈದಾನಕ್ಕೆ ಆಗಮಿಸಿ ಅರ್ಧ ಗಂಟೆಗೂ ಹೆಚ್ಚು ಕಾಲ ಆಟಗಾರರರಂತೇಯೆ ಬ್ಯಾಟಿಂಗ್, ಬೌಲಿಂಗ್ ಮಾಡಿ ಎಲ್ಲರನ್ನೂ ಹುಬ್ಬೇರುವಂತೆ ಮಾಡಿದರು..

ಈ ಸಂದರ್ಭದಲ್ಲಿ ಉಪಮೇಯರ್ ಶಿಲ್ಪಾ ಜಯಪ್ರಕಾಶ್, ವರ್ತಕರಾದ ರಾಘವೇಂದ್ರ ಎನ್ ದಿವಾಕರ್, ಗೌಡ್ರು ಬಸವರಾಜಪ್ಪ, ಶಿವಪ್ಪ, ಕೆಎಸ್ ಸಣ್ಣಿಂಗಪ್ಪ, ದೇವರಾಜ್, ಎನ್ ಟಿ ನಾಗರಾಜ್, ಮಧುನಾಗರಾಜ್, ಸೇರಿದಂತೆ ಮತ್ತಿತರರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version