ಕ್ರೀಡೆ
ಕೆಪಿಎಲ್ ಕ್ರಿಕೆಟ್ | ‘ಬಳ್ಳಾರಿ ಟಸ್ಕರ್ಸ್’ ನ ಮಾಲೀಕ ವಿನೋದ್ ರೆಡ್ಡಿ ಬಂಧನ
ಸುದ್ದಿದಿನ, ಬೆಂಗಳೂರು | ಕೆಪಿಎಲ್ ಕ್ರಿಕೆಟ್ ನ ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕರಾದ ಅರವಿಂದ್ ರೆಡ್ಡಿಯವರನ್ನು ಪೊಲೀಸರ ಮೇಲೆ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಎಚ್ ಎ ಎಲ್ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಸಂಜೆ ಎಚ್ ಎ ಎಲ್ ಠಾಣೆಯ ವ್ಯಾಪ್ತಿಯಲ್ಲಿ ಈ ಸೋನ್ ಕ್ಲಬ್ ನಲ್ಲಿ ‘ ಬಳ್ಳಾರಿ ಟಸ್ಕರ್ಸ್’ ತಂಡದಿಂದ ಕಾರ್ಯಕ್ರಮವನ್ನು ಆಯೋಜಿಸಿದ ಸಂದರ್ಭದಲ್ಲಿ, ಸುಮಾರು ರಾತ್ರಿ1 ಗಂಟೆಯವರೆಗೂ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ ಮೈಕ್ ಬಳಕೆಗೆ 10 ಗಂಟೆಯ ತನಕ ಮಾತ್ರ ಅವಕಾಶವಿತ್ತು.
ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ . ನಂತರ ಅರೆಸ್ಟ್ ಮಾಡಲು ಬಂದ ಪೊಲೀಸರ ಮೇಲೆ ರೆಡ್ಡಿ ಮಾತಿನ ಚಕಮಕಿ ನಡೆಸಿ ದೌರ್ಜನ್ಯವೆಸಗಿದ್ದಾನೆ. ಈ ಸಂಬಂಧ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401