ದಿನದ ಸುದ್ದಿ

ಅಲ್ಪಸಂಖ್ಯಾತ ಇಲಾಖೆ : ಕೆ.ಪಿ.ಎಸ್.ಸಿ ಮತ್ತು ಯು.ಪಿ.ಎಸ್.ಸಿ ಪರೀಕ್ಷೆಗಳ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ

Published

on

ಸುದ್ದಿದಿನ, ಬೆಂಗಳೂರು : 2019-20ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಗೆ ಕೆ.ಪಿ.ಎಸ್.ಸಿ ಮತ್ತು ಯು.ಪಿ.ಎಸ್.ಸಿ ಪರೀಕ್ಷೆಗಾಗಿ ಉಚಿತ ತರಬೇತಿಯನ್ನು ನೀಡಲು ಅರ್ಜಿಗಳನ್ನು ಅರ್ಹ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ರಾಜ್ಯದ ನಿವಾಸಿಯಾಗಿರಬೇಕು, ಕುಟುಂಬದ ವಾರ್ಷಿಕ ವರಮಾನವು ಪ್ರವರ್ಗ-1ಕ್ಕೆ ರೂ.4.50 ಲಕ್ಷಗಳು ಹಾಗೂ ಇತರೆ ವರ್ಗಗಳಿಗೆ ರೂ.3.50 ಲಕ್ಷಗಳು ಮೀರಬಾರದು. ಅರ್ಜಿಗಳನ್ನು ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವೆಬ್‍ಸೈಟ್
https://gokdom.kar.nic.in/Trainings.asp ನಲ್ಲಿ ಲಭ್ಯವಿರುತ್ತದೆ.

ಆನ್‍ಲೈನ್ ಮೂಲಕ ಅರ್ಜಿಯನ್ನು ದಿನಾಂಕ:10-07-2019 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ನರೇಂದ್ರ ಆಸ್ಪತ್ರೆ ಹಿಂಭಾಗ, ಎಂ.ಬಿ.ರಸ್ತೆ, ಕೋಲಾರ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವೆಬ್‍ಸೈಟ್https://gokdom.kar.nic.in/Trainings.asp ಇಲ್ಲಿಗೆ ಸಂಪರ್ಕಿಸಬಹುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version