ದಿನದ ಸುದ್ದಿ
ವೈಫೈ ಬಳಸಿ ಕೆಪಿಎಸ್ಸಿ ಪಾಸಾದ; ಹೇಗೆಂದು ಗೊತ್ತಾ?
ಸುದ್ದಿದಿನ ಡೆಸ್ಕ್: ಉಚಿತ ವೈಫೈ ಸಿಕ್ಕರೆ ಹಾಡು, ಸಿನಿಮಾ, ಗೇಮ್, ಚಾಟ್ ಮಾಡಲು ಬಳಸಿಕೊಳ್ಳುತ್ತಾರೆ. ಆದರೆ, ರೈಲ್ವೆ ನಿಲ್ದಾಣದಲ್ಲಿ ಕೂಲಿ ಮಾಡುವ ಯುವಕನೊಬ್ಬ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದಾನೆ.
ಹೆಸರು ಶ್ರೀನಾಥ್, ಬಡ ಕುಟುಂಬದ ಯುವಕ. ಕೇರಳದ ಎರ್ನಾಕುಲಂನ ರೈಲ್ವೆ ಜಂಕ್ಷನ್ ನಲ್ಲಿ ಐದು ವರ್ಷಗಳಿಂದ ಲಗೇಜ್ ಹೊತ್ತೊಯ್ಯುವ ಕೂಲಿಕಾರ. ಆದರೆ, ಅವನ ಕಿವಿಯಲ್ಲಿ ಇಯರ್ ಫೋನ್ ಸಿಕ್ಕಿಸಿಕೊಂಡಿರುತ್ತದೆ. ಇದೆ ಶ್ರೀನಾಥನ ಯಶಸ್ಸಿನ ಸಾಧನ.
ಯಾರಿಗಾದರೂ ಒಂದು ಕೆಲಸ ಸಿಕ್ಕಿಬಿಟ್ಟರೆ ಅದನ್ನು ಬೆಟ್ಟದಂತೆ ಭಾವಿಸುತ್ತಾರೆ, ಅದನ್ನು ನಿಭಾಯಿಸುವುದರಲ್ಲೇ ಹೈರಾಣರಾಗಿದ್ದೇವೆ ಎಂಬಂತೆ ಶೋ ಮಾಡುತ್ತಾರೆ. ಆದರೆ, ಶ್ರೀನಾಥ್ ಹಾಗೆ ಮಾಡದೇ ಕೆಲಸ ಮಧ್ಯೆ ಓದುತ್ತಿದ್ದನೆಂದರೆ ನೀವು ನಂಬಲೇಬೇಕು. ಹೇಳಿ ಕೇಳಿ ಎರ್ನಾಕುಲಂ ನಗರ, ರೈಲ್ವೆ ಜಂಕ್ಷನ್ ಬೇರೆ ಆಗಿದೆ. ಈ ರೈಲ್ವೆ ನಿಲ್ದಾಣದಲ್ಲಿ ವೈಫೈ ಉಚಿತವಾಗಿದೆ. ಯಾರಾಬೇಕಾದರೂ ಬಳಸಿಕೊಳ್ಳಬಹುದು.
ಕೆಲಸ ಬಿಟ್ಟು ಓದುತ್ತಾ ಕುಳಿತರೆ ತನ್ನ ನಂಬಿದ ಕುಟುಂಬ ಉಪವಾಸ ಬೀಳಬೇಕಾಗುತ್ತದೆ ಎಂಬ ಆತಂಕದಲ್ಲಿ ಕೈಯಲ್ಲಿ ಪುಸ್ತಕ ಹಿಡಿಯದೇ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಈ ವೈಫೈಯನ್ನು ಶ್ರೀನಾಥ್ ಸ್ಟಡಿ ಮೆಟಿರಿಯಲ್ ಆಗಿ ಬಳಸಿಕೊಂಡು ಅಭ್ಯಾಸ ನಿರತನಾದ.
ಕೋರ್ಸ್ ಮೆಟರಿಯಲ್ ಇಯರ್ ಫೋನ್ ಮೂಲಕ ಕೇಳುತ್ತಿದ್ದ. ಮನಸ್ಸಿನಲ್ಲೇ ಸಮಸ್ಯೆ ಬಗೆಹರಿಸಿಕೊಳ್ಳುತ್ತಿದ್ದ. ಹೀಗೆ ಉಚಿತ ವೈಫೈಯನ್ನು ಸದ್ಬಳಕೆ ಮಾಡಿಕೊಂಡು ಕೇರಳ ಪಬ್ಲಿಕ್ ಸರ್ವೀಸ್ ಕಮಿಷನ್ ಪರೀಕ್ಷೆಗೆ ತಯಾರಿ ನಡೆಸಿದ. ಶ್ರಮ ಪಟ್ಟರೆ ತಕ್ಕ ಫಲ ಸಿಗುತ್ತದೆ ಎಂಬುದಕ್ಕೆ ಈ ಯುವಕನೇ ಸೂಕ್ತ ನಿದರ್ಶನ.
ರೈಲ್ವೆ ನಿಲ್ದಾಣದಲ್ಲಿ ಲಭಿಸುತ್ತಿದ್ದ 20-40 MBPS ವೇಗದ ಇಂಟರ್ನೆಟ್ ಬಳಸಿಕೊಂಡು ಪ್ರಶ್ನಾವಳಿ, ಪುಸ್ತಕ, ಆನ್ ಲೈನ್ ಸ್ಟಡಿ ಮೆಟಿರಿಯಲ್ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದ. ಇದರಿಂದ ಶ್ರೀನಾಥಗೆ ಹಣ ಉಳಿತಾಯವಾಗುತ್ತಿತ್ತು. ಈಗ ಶ್ರೀನಾಥ್ ಕೇರಳ ಸರ್ಕಾರದ ಭೂ ಕಂದಾಯ ಇಲಾಖೆಯಲ್ಲಿ ವಿಲೇಜ್ ಫೀಲ್ಡ್ ಅಸಿಸ್ಟೆಂಟ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ.
(ಕೃಪೆ-NDTV)