ದಿನದ ಸುದ್ದಿ
ಕೆಆರ್ ನಗರ ಪುರಸಭಾ ಮುಖ್ಯಾಧಿಕಾರಿಯಿಂದ ಪತ್ರಕರ್ತರಿಗೆ ನಿಂಧನೆ ; ಬೆದರಿಕೆ : ತಾಲ್ಲೂಕು ಪತ್ರಕರ್ತರ ಸಂಘ ಪ್ರತಿಭಟನೆ
ಸುದ್ದಿದಿನ,ಟಿ. ನರಸೀಪುರ: ಕೆಆರ್ ನಗರ ಪುರಸಭಾ ಮುಖ್ಯಾಧಿಕಾರಿ ಪತ್ರಕರ್ತರನ್ನು ಅವ್ಯಾಚ ಶಬ್ಧಗಳಿಂದ ನಿಂಧಿಸಿ ಸಾರ್ವಜನಿಕವಾಗಿ ಬೆದರಿಕೆ ಹಾಕಿರುವುದನ್ನು ಖಂಡಿಸಿ ತಾಲ್ಲೂಕು ಪತ್ರಕರ್ತರ ಸಂಘ ಪ್ರತಿಭಟನೆ ನಡೆಸಿತು.
ಪಟ್ಟಣದ ತಹಶಿಲ್ದಾರ್ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದ ಪತ್ರಕರ್ತರು, ಕೆಆರ್‍ನಗರದ ಪುರಸಭಾ ಮುಖ್ಯಾಧಿಕಾರಿ ಕೆ. ಶಿವಣ್ಣ ನಡೆಯನ್ನು ತೀವ್ರವಾಗಿ ಖಂಡಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಸಂವಿಧಾನದ ಚೌಕಟ್ಟಿನಲ್ಲಿ ಶಾಸಕಾಂಗ-ಕಾರ್ಯಾಂಗ-ನ್ಯಾಯಾಂಗ ಹಾಗೂ ಪತ್ರಿಕಾರಂಗಗಳು ಕಾರ್ಯನಿರ್ವಹಿಸುತ್ತಿದ್ದು, ನಮ್ಮನ್ನು ಹೆದರಿಸುವ ಬೆದರಿಸುವ ಯಾವ ಹಕ್ಕು ಅವರಿಗಿಲ್ಲ. ಅಂತಹ ಸಂದರ್ಭವೇನಾದರು ಅವರಿಗೆ ಒದಗಿದ್ದರೆ ಕಾನೂನಿನ ಮೂಲಕ ಹೋರಾಟ ಮಾಡಬಹುದಿತ್ತು. ಅದು ಬಿಟ್ಟು ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿರುವುದು ಅವರ ಘನತೆಗೆ ಶೋಭೆ ತರುವಂತಹದ್ದಲ್ಲ. ಕೂಡಲೆ ಆತನನ್ನು ಅಮಾನತ್ತುಗೊಳಿಸದಿದ್ದರೆ ರಾಜ್ಯಾಧ್ಯಂತ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ತಾಲ್ಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಂ. ನಾಗೇಂದ್ರ ಕುಮಾರ್ ಮಾತನಾಡಿ, ದಿನದ 24 ಗಂಟೆ ವರ್ಷದ 365 ದಿನ ಪತ್ರಕರ್ತ ಸೇವೆಯಲ್ಲಿ ತಮ್ಮ ಜೀವನವನ್ನು ಲೆಕ್ಕಿಸದೆ ವೃತ್ತಿಯಲ್ಲಿರುವ ತನಕ ಜೀವದ ಹಂಗನ್ನು ತೊರೆದು ಸದಾಕಾಲ ಚಟುವಟಿಕೆಯಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪತ್ರಕರ್ತರುಗಳನ್ನು ನಿಂಧಿಸುವ ಹಾಗೂ ಬೆದರಿಸುವ ನೈತಿಕತೆ ಯಾರಿಗೂ ಇಲ್ಲ. ವಾಸ್ತವವಾಗಿ ನಡೆಯುವ-ನಡೆದಿರುವ ಘಟನೆಯನ್ನ ಯಥಾವತ್ತಾಗಿ ಬರವಣಿಗೆಯ ಮೂಲಕ ಎತ್ತಿಹಿಡಿಯುವ ಕೆಲಸವನ್ನು ಮಾಡುತ್ತಿರುವ ಪತ್ರಕರ್ತರನ್ನು ನಿಂದಿಸಿರುವುದರಿಂದ ಕೂಡಲೆ ಜಿಲ್ಲಾಡಳಿತ ಮದ್ಯ ಪ್ರವೇಶಿಸಿ ಆತನನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ತಹಶಿಲ್ದಾರ್ ಡಿ. ನಾಗೇಶ್ ಮಾತನಾಡಿ, ಇಂತಹ ಘಟನೆ ನಡೆಯಬಾರದು. ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಸರಿಪಡಿಸುವ ಮಹತ್ತರ ಜವಾಬ್ದಾರಿ ಹೊತ್ತಿರುವ ಪತ್ರಕರ್ತರುಗಳನ್ನು ನಿಂದಿಸಿರುವುದು ಖಂಡನಾರ್ಹ. ಈ ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗುವುದೆಂದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಅಕ್ರಂಪಾಷ, ಪ್ರಧಾನ ಕಾರ್ಯದರ್ಶಿ ಆನಂದ್‍ಕುಮಾರ್, ಕಾರ್ಯದರ್ಶಿ ನಂಜುಂಡಯ್ಯ, ಖಜಾಂಚಿ ಸಿದ್ದರಾಜು, ಮಹದೇವ್, ಮಾಧು, ನಾರಾಯಣ್, ಕುಮಾರ್, ಮೂಗೂರು ರಂಗಸ್ವಾಮಿ, ರೇವಣ್ಣ, ಗೋವಿಂದ, ಶೇಖರ್, ಚೆನ್ನಬಸವಣ್ಣ ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243