ದಿನದ ಸುದ್ದಿ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 190 ನೇ ಪುಣ್ಯ ಸ್ಮರಣೆಯ ಈ ಹೊತ್ತಿನಲ್ಲಿ..!
- ದಿವ್ಯಶ್ರೀ. ವಿ, ಬೆಂಗಳೂರು
ಇಂದು ಭಾರತದ ಧೀರ ಮತ್ತು ಅತ್ಯಂತ ಶ್ರೇಷ್ಠ ಸ್ವಾತಂತ್ರ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 190 ನೇ ಪುಣ್ಯ ಸ್ಮರಣೆ. ಇವರು 15 ರಂದು ಆಗಸ್ಟ್ 1796 ರಲ್ಲಿ ಸಂಗೊಳ್ಳಿ ಎಂಬ ಗ್ರಾಮದಲ್ಲಿ ಅಂದರೆ ಇಂದಿನ ಬೆಳಗಾವಿಯಲ್ಲಿ ಜನಿಸಿದರು. ಬ್ರಿಟಿಷರ ಆಡಳಿತದ ವಿರುದ್ಧ ಹೋರಾಡಿದ ಪ್ರಮುಖರಲ್ಲಿ ಇವರೊಬ್ಬರು.
ಇವರ ತಂದೆ ಭರಮಪ್ಪ ರೋಗಣ್ಣವರ ತಾಯಿ ಕೆಂಚವ್ವ ರೋಗಣ್ಣವರ. ಧೀರ, ವೀರ,ಶೂರ, ಕ್ರಾಂತಿವೀರ ಹೀಗೆ ಅನೇಕ ಹೆಸರುಗಳು ರಾಯಣ್ಣನಿಗೆ ಇದೆ. ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮನವರ ಬಲಗೈ ಬಂಟನಾಗಿದ್ದರು ರಾಯಣ್ಣ. ಕಿತ್ತೂರಾಣಿ ಚೆನ್ನಮ್ಮನ ಆಸ್ಥಾನದಲ್ಲಿ ಇದ್ದ ರಾಯಣ್ಣನಿಗೆ ಅಲ್ಲಿನ ಜನರೆಲ್ಲರು ರಾಯ ಎಂದು ಕರೆಯುತ್ತಿದ್ದರು.
ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧ ಮಾದರಿಯನ್ನು ಅನುಸರಿಸಿ ಹೋರಾಟ ನಡೆಸಿದ ವೀರ. 1824 ನೇ ಇಸವಿಯಲ್ಲಿ ಭಾರತ ದೇಶವನ್ನು ಅಕ್ರಮಿಸಿಕೊಂಡಿದ್ದ ಬ್ರಿಟಿಷರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ ವ್ಯಕ್ತಿ ನಮ್ಮ ರಾಯಣ್ಣ. ಕಿತ್ತೂರು ರಾಣಿ ಚೆನ್ನಮ್ಮರಿಗೆ ಬೆನ್ನೆಲುಬಾಗಿ ನಿಂತು ರಾಜ್ಯವನ್ನು ಬ್ರಿಟೀಷರಿಂದ ರಕ್ಷಣೆ ಮಾಡಲು ರಾಯಣ್ಣ ಹೋರಾಟ ನಡೆಸಿದರು.
ಯುದ್ದದಲ್ಲಿ ಮೋಸದಿಂದ ರಾಯಣ್ಣನನ್ನು ಬ್ರಿಟಿಷರು ಸರೆ ಗೊಳಿಸಿದ್ದರು. ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು ಬಂದಿಸಿ ನಂದಗಡದಲ್ಲಿ. ಜನವರಿ 26, 1831ರಂದು ಗಲ್ಲಿಗೇರಿಸಿದರು. ದೇಶದ ಸ್ವಾತಂತ್ರ್ಯ ಇತಿಹಾಸದಲ್ಲಿ ಕ್ರಾಂತಿವೀರನದು ತನ್ನದೇ ಆದ ವೈಶಿಷ್ಟತೆ ಇತಿಹಾಸವೂ ಇದೆ. ಬರಿ ಬೆಳಗಾವಿಯಲ್ಲಿ ಅಷ್ಟೇ ಅಲ್ಲದೆ ರಾಜ್ಯದ ಒಂದೊಂದು ಜಿಲ್ಲೆಯಲ್ಲಿ ಕೂಡ ಕ್ರಾಂತಿವೀರನ ಪ್ರತಿಮೆ ಪ್ರತಿಷ್ಠಾಪನೆ ಮಾಡಲೇಬೇಕು ಇದು ಪ್ರತಿಯೊಬ್ಬ ಕನ್ನಡಿಗನ ಆಸೆಯು ಮತ್ತು ಕನಸು ಕೂಡ ಹೌದು.
ಕರ್ನಾಟಕ ರಕ್ಷಣಾ ವೇದಿಕೆಗೆ ಸಂಗೊಳ್ಳಿ ರಾಯಣ್ಣ ಮಾದರಿ ಮತ್ತು ಸ್ಪೂರ್ತಿ.ಹೇಗೆ ಸಂಗೊಳ್ಳಿ ರಾಯಣ್ಣ ಅವರು ನಮ್ಮ ದೇಶಕ್ಕೆ ಹೋರಾಡಿದರು ಅದೇ ರೀತಿ ಎಲ್ಲ ಕನ್ನಡಿಗರು ಕೂಡ ತನ್ನ ದೇಶಕ್ಕೆ ಮತ್ತು ರಾಜ್ಯಕ್ಕೆ ಯಾವಾಗಲೂ ಹೋರಾಡಬೇಕು ಎನ್ನುವ ನಿಲುವು ನಮ್ಮ ಕರವೇ ದು. ಸಂಗೊಳ್ಳಿ ರಾಯಣ್ಣನ ಹುತಾತ್ಮ ದಿನಾಚರಣೆಯನ್ನು ಕರವೇ ಯು ಜನವರಿ 30ರಂದು ಬೆಂಗಳೂರಿನ ವಿಜಯನಗರ ಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಎಲ್ಲಾ ಕರವೇ ಕಾರ್ಯಕರ್ತರ ಪಾಲ್ಗೊಳ್ಳುತ್ತಿದ್ದಾರೆ. ಕ್ರಾಂತಿವೀರನ ದೇಶದ ಭಕ್ತಿ ಕಿಚ್ಚನ್ನು ಪ್ರತಿಯೊಬ್ಬ ಭಾರತೀಯನು ಅಳವಡಿಸಿಕೊಳ್ಳಬೇಕು. ರಾಯಣ್ಣನ ಹೋರಾಟದ ಬದುಕು ಇನ್ನೂ ಸಾವಿರ ವರ್ಷವಾದರೂ ಅಮರ.
ಸುದ್ದಿದಿನ.ಕಾಂ|ವಾಟ್ಸಾಪ್|9980346243