/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಲೈಫ್ ಸ್ಟೈಲ್

ಕೃಷ್ಣ ನೀ ಬೇಗನೆ ಬಾರೋ…!

Published

on

ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಸಡಗರ ದೇಶದೆಲ್ಲೆಡೆ ಮನೆಮಾಡಿರುವ ಬೆನ್ನಲ್ಲೇ, ಫ್ಯಾಷನ್ ಲೋಕದಲ್ಲೂ ಕೃಷ್ಣ ನ ಕೊಳಲಿನ ದನಿ ಕೇಳಿಬರುತ್ತಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಮತ್ತಷ್ಟು ಗ್ಲಾಮರಸ್ ಲುಕ್ ನೀಡಲು ಒಂದು ಚೆಂದದ ಕೃಷ್ಣಾವತಾರದ ಸೀರೆ ಹಾಗೂ ರವಿಕೆ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕೃಷ್ಣ ಪ್ರಿಂಟ್ ಫ್ಯಾಷನ್ ಸೀರೆಗಳು ಮಾನಿನಿಯರ ಹಬ್ಬದ ಫೇವರಿಟ್ ಔಟ್ ಫಿಟ್ ಎನಿಸಿಕೊಂಡಿದೆ. ರವಿಕೆಯ ಮೇಲಿನ ರಾಧಾಕೃಷ್ಣ ಎಂಬ್ರಾಯ್ಡರಿ ಹಬ್ಬಕ್ಕೆ ಮತ್ತಷ್ಟು ಕಳೆ ಕಟ್ಟಿದೆ.

ಕೇವಲ ವಸ್ತ್ರ ಗಳಿಗೆ ಮಾತ್ರ ಸೀಮಿತವಾಗಿರದೆ, ಕೃಷ್ಣನ ಕೆತ್ತನೆ ಇರುವ ಆಕ್ಸಿಡೈಸ್ಡ್ ಆಭರಣಗಳು, ಚಿನ್ನದ ಪದಕ,ಹಾರ, ಓಲೆ, ಕೃಷ್ಣನ ಪೇಂಟಿಂಗ್ ಇರುವ ಟೆರಕೋಟಾ ಆಭರಣಗಳು ಮುದ್ದು ಕೃಷ್ಣನ ಹಬ್ಬಕ್ಕೆ ಟ್ರೆಂಡ್ ಆಗುತ್ತಿರುವ ಲೇಟೆಸ್ಟ್ ಟ್ರೆಂಡ್ ಸೆಟ್ಟರ್ ಆಭರಣಗಳಾಗಿವೆ.

ಕೇವಲ ವಸ್ತ್ರಾಭರಣಗಳಿಗೆ ಸೀಮಿತವಾಗಿದ್ದ ಕೃಷ್ಣ ಫ್ಯಾಷನ್ ಟ್ರೆಂಡ್ ಈಗ ನೈಲ್ ಆರ್ಟ್ ರೂಪ ತಾಳಿದ್ದು.. ಕೈ ಉಗುರಿನ ಮೇಲೆ ಲಲನಲೋಹನ , ಮುದ್ದು ಕೃಷ್ಣನ ನೈಲ್ ಆರ್ಟ್ ಸೋಷಿಯಲ್ ಮೀಡಿಯಾ ದಲ್ಲಿ ಈಗ ಟ್ರೆಂಡಿಂಗ್. ಹಬ್ಬಕ್ಕೆಂದೇ, ರಾಧಾ ಕೃಷ್ಣ ರ ಮೆಹಂದಿ ಲಲನೆಯರ ಕೈ ಕಾಯಿಲೆಗಳಲ್ಲಿ ಅರಳಿದ್ದು, ಹಬ್ಬದ ರಂಗು ಗರಿಗೆದರಿದೆ.

ಹಾಗಾದರೆ  ನಮ್ಮ ಮುದ್ದು ಕೃಷ್ಣ ನ ಹಬ್ಬಕ್ಕೆ ,ನೀವೂ  ಕೃಷ್ಣಾವತಾರಂ ಫ್ಯಾಷನ್ ನಾದಕ್ಕೆ , ತಲೆದೂಗೋಣ ಬನ್ನಿ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version