ದಿನದ ಸುದ್ದಿ
ಯುವ ಸಾಹಿತಿ ಕೆ.ಶ್ರೀಧರ್ (ಕೆ.ಸಿರಿ) ಅವರಿಗೆ ರಾಷ್ಟ್ರೀಯ ಬಸವ ಪ್ರಶಸ್ತಿ
ಸುದ್ದಿದಿನ,ಚಾಮರಾಜನಗರ : ಹರವೆ ಹೋಬಳಿಯ ಗ್ರಾಮಲೆಕ್ಕಿಗರಾದ ಕೆ.ಶ್ರೀಧರ್ (ಕೆ.ಸಿರಿ) ರವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಡಾ.ಪಂಡಿತ್ ಪುಟ್ಟರಾಜ ಸೇವಾ ಸಮಿತಿ ದೆಹಲಿ. ಹಾಗೂ ಚೇತನ ಪೌಂಡೇಶನ್ ಕರ್ನಾಟಕ ಹುಬ್ಬಳ್ಳಿರವರು ದಿನಾಂಕ 22-05-2022 ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ರಾಷ್ಟ್ರೀಯ ಬಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೆ.ಶ್ರೀಧರ್ (ಕೆ.ಸಿರಿ) ಈಗಾಗಲೇ ಚಿತ್ತದೊಳಗೇಕೋ ಮತ್ತದೇ ನೆನಪು ಕವನ ಸಂಕಲನ, ಸ್ವಪ್ನದಲ್ಲಿ ಸೊರಗಿದ ಪ್ರೀತಿ ಕಾದಂಬರಿ ಹಾಗೂ ನೀರಜೆಗೇಕೆ ನಿಕೃಷ್ಟ ಬದುಕು ಕಾದಂಬರಿ ಲೋಕಾರ್ಪಣೆಗೊಳಿಸಿ ವಿಮರ್ಶಕರಿಂದ ಮೆಚ್ಚುಗೆ ಗಳಿಸಿದ್ದು ಅಂತರಂಗದ ಅಸ್ಪೃಶ್ಯತೆ(ನಾಟಕ) ಮತ್ತು ಅಂತರ್ಮುಖಿ (ಲೇಖನಗಳು) ಪುಸ್ತಕ ಲೋಕಾರ್ಪಣೆಗೆ ಸಿದ್ದವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243