ದಿನದ ಸುದ್ದಿ
ಕೆ ಎಸ್ ಆರ್ ಟಿ ಸಿ ಬಸ್ ಪ್ರಯಾಣಿಕರಿಗೆ ಇಲ್ಲಿದೆ ಶುಭ ಸುದ್ದಿ..!
ಸುದ್ದಿದಿನ, ಬೆಂಗಳೂರು: ಕೊರೋನಾ ಪರಿಣಾಮವಾಗಿ, ಲಾಕ್ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ನಷ್ಟದಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು, ವಾರದ ಕೊನೆಯ ದಿನ ಪಡೆಯಲಾಗುತ್ತಿರುವ ಶೇ.10 ಹೆಚ್ಚುವರಿ ಪ್ರಯಾಣದ ದರವನ್ನು ರದ್ದು ಮಾಡಿ ಆದೇಶ ಹೊರಡಿಸಿದೆ.
ನಿಗಮದ ಈ ಆದೇಶವು ಡಿ.31ರವರೆಗೆ ಜಾರಿಯಲ್ಲಿರುತ್ತದೆ. ಎರಡೂವರೆ ತಿಂಗಳ ಕಾಲ ಪ್ರಯಾಣಿಕರು ಶೇ 10 ಹೆಚ್ಚುವರಿ ಹಣ ಪಾವತಿಸದೆ ವಾರದ ಕೊನೆಯಲ್ಲಿ ಪ್ರಯಾಣಿಸಬಹುದಾಗಿದೆ. ಈ ಹಿಂದೆ ಶುಕ್ರವಾರದಿಂದ ಭಾನುವಾರದವರೆಗೆ ನಿಗಮದ ವೈಭವ್, ರಾಜಹಂಸ, ಐರಾವತ ಬಸ್ಗಳಲ್ಲಿ ಪ್ರಯಾಣ ದರವನ್ನು ಶೇ 10 ಹೆಚ್ಚಿಸಲಾಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243