ದಿನದ ಸುದ್ದಿ

22 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ, ಕಾರು ಖಾಕಿ ಜಪ್ತಿ ; ಮೂವರು ಆರೋಪಿಗಳ ಬಂಧನ

Published

on

  • ಗಿರೀಶ್ ಕುಮಾರ್ ಗೌಡ, ಬಳ್ಳಾರಿ

ಸುದ್ದಿದಿನಡೆಸ್ಕ್:ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣಗಳ ಪತ್ತೆ ಆಗಿದೆ. ಮೂವರು ಆರೋಪಿಗಳಿಂದ 22 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ, ಕಾರು ಖಾಕಿ ಜಪ್ತಿಮಾಡಿದ ವಿಜಯನಗರ ಜಿಲ್ಲೆಯ ಖಾಕಿ ಪಡೆ.

ಮೂರು ಆರೋಪಿಗಳ ಬಂಧನ, 10 ರಿಂದ 15 ವಾರೆಂಟ್ ಗಳು ಬಾಕಿ

ಎಂ. ಇಂದ್ರ ಮತ್ತು ಜಿ. ಸತೀಶ ಗೌಡ , ವಲ್ಲಿ @ ಸುಭಾಷ ಈ ಮೂರು ಆರೋಪಿತರು ರಾಜ್ಯದ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು 10-15 ಠಾಣೆಗಳಲ್ಲಿ ವಾರೆಂಟ್‌ಗಳು ಬಾಕಿಯಿರುತ್ತವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇವರುಗಳನ್ನು ದಸ್ತಗಿರಿ ಮಾಡಿದ ಪೊಳಲೀಸರು ಇವರಿಂದ ಕೂಡ್ಲಿಗಿ ಠಾಣೆಯ -2 ಹಾಗೂ ಹಗರಿಬೊಮ್ಮನಹಳ್ಳಿ ಠಾಣೆಯ -2 ಒಟ್ಟು 4 ಮನೆ ಕಳ್ಳತನ ಪ್ರಕರಣಗಳಲ್ಲಿ ಆರೋಪಿತರಿಂದ ಒಟ್ಟು 215 ಬಂಗಾರದ ಆಭರಣ, 2 ಕೆ.ಜಿ.ಬೆಳ್ಳಿ ಆಭರಣ, ಒಂದು ಸ್ವಿಫ್ಟ್ ಡಿಜೈರ್ ಕಾರು ಅಂದಾಜು ಬೆಲೆ 2 ಲಕ್ಷ ರೂಪಾಯಿಗಳ ಮೌಲ್ಯದ ಒಟ್ಟು 22,00,750/- ರೂ [ ಇಪ್ಪತ್ತೆರೆಡು ಲಕ್ಷದ ಏಳುನೂರ ಐವತ್ತು ರೂಗಳು] ಬೆಲೆ ಬಾಳುವ ವಸ್ತುಗಳನ್ನು ಪೊಲೀಸರು ಜಪ್ತು ಮಾಡಿದ್ದಾರೆ.

ಹಿರಿಯ ಅಧಿಕಾರಿಗಳು ಮಾರ್ಗದರ್ಶನ

ಶ್ರೀ.ಹರಿಬಾಬು, ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು, ಸಲೀಂ ಪಾಷ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ವಿಜಯನಗರ ಜಿಲ್ಲೆ ಮತ್ತು ಮಲ್ಲೇಶ ದೊಡ್ಡಮನಿ, ಡಿ.ಎಸ್.ಪಿ.ಕೂಡ್ಲಿಗಿ ಉಪ-ವಿಭಾಗ ರವರ ಸೂಕ್ತ ಮಾರ್ಗದರ್ಶನದಲ್ಲಿ ಪ್ರಹ್ಲಾದ.ಆರ್.ಚನ್ನಗಿರಿ ಸಿ.ಪಿ.ಐ ಕೂಡ್ಲಿಗಿ ವೃತ್ತ, ಶ್ರೀ.ವಿಕಾಸ.ಪಿ.ಲಮಾಣಿ ಸಿಪಿಐ ಹೆಚ್.ಬಿ.ಹಳ್ಳಿ ವೃತ್ತ, ಹಾಗೂ ಕೂಡ್ಲಿಗಿ ಠಾಣೆಯ ಪಿ.ಎಸ್.ಐ .ಪ್ರಕಾಶ ಮತ್ತು ಸಿಬ್ಬಂದಿಯವರು ಪತ್ತೆ ಕಾರ್ಯವನ್ನು ಕೈಗೊಂಡು ಆರೋಪಗಳನ್ನು ಪತ್ತೆ ಹಚ್ಚಲು ಮಾರ್ಗದರ್ಶನ ನೀಡಿದ್ದಾರೆ.

ಕಾರ್ಯಾಚರಣೆ ಮಾಡಿದ ಮಲ್ಲೇಶ ದೊಡ್ಡಮನಿ, ಡಿ.ಎಸ್.ಪಿ ಕೂಡ್ಲಿಗಿ ಉಪ-ವಿಭಾಗ,ಪ್ರಲ್ಟಾದ.ಆರ್.ಚನ್ನಗಿರಿ, ಸಿ.ಪಿ.ಐ ಕೂಡ್ಲಿಗಿ ವೃತ್ತ, ವಿಕಾಸ.ಪಿ.ಲಮಾಣಿ, ಸಿಪಿಐ ಹೆಚ್.ಬಿ.ಹಳ್ಳಿ ವೃತ್ತ, ಪ್ರಕಾಶ.ಸಿ. ಪಿ.ಎಸ್.ಐ (ಕಾ&ಸು) ಕೂಡ್ಲಿಗಿ ಠಾಣೆ, ಹಾಗು ಸಿಬ್ಬಂದಿಯಗಳಾದ ಮುಜಾವರ ಬಾಷಾ ಎಎಸ್‌ಐ, ತಿಪ್ಪೇಸ್ವಾಮಿ, ಬಸಪ್ಪ ಬದ್ದಿ , ಬಂಡೆ ರಾಘವೇಂದ್ರ, .ಮಂಜುನಾಥ, ಬಸವರಾಜ, ಕುಮಾರ ಪತ್ರಿ , ಶ್ರೀ.ರಾಜೇಂದ್ರಪ್ರಸಾದ, ಹಸನುಲ್ಲಾ, ಇರ್ಷಾದ, ಅಂಜಿನಪ್ಪ, .ಕೊಟ್ರೇಶ್, ಶ್ರೀ.ಹಂಪಣ್ಣ, ಮಲ್ಲಿಕಾರ್ಜುನ, ಪ್ರೇಮಲತಾ, ಬಾಗಳಿ ಕೊಟ್ರೇಶ ಇವರುಗಳಿಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ‌.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version