ರಾಜಕೀಯ
ಮಾಧ್ಯಮಗಳ ಮೇಲೆ ಕುಮಾರಸ್ವಾಮಿ ಕೆಂಡ !
ಸುದ್ದಿದಿನ ಡೆಸ್ಕ್ | ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೆ ಮಾಧ್ಯಮಗಳ ವೇಲೆ ಗರಂ ಆಗಿದ್ದಾರೆ. ಪ್ರತ್ಯೇಕ ರಾಜ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಅನಗತ್ಯ ವಿವಾದ ಸೃಷ್ಟಿಸಿವೆ. ಪ್ರತ್ಯೇಕತೆ ಕೂಗಿ ಕೇಳಿಬರುತ್ತಿರುವುದು ರಾಜಕೀಯ ಮುಖಂಡರಿಂದಲ್ಲ ಬದಲಿಗೆ ಮಾಧ್ಯಮ ಗಳಿಂದ ಎಂದು ಕಿಡಿಕಾರಿದ್ದಾರೆ.
ಪ್ರತ್ಯೇಕ ರಾಜ್ಯ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಿರುವ ಮಾಧ್ಯಮಗಳು ದಿನಪೂರ್ತಿ ಅದನ್ನೇ ತೋಓರಿಸುತ್ತಿವೆ. ನಾನು ಶಾಸಕ ಶ್ರೀರಾಮುಲು ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದೇನೆ. ಆದರೆ ಅದನ್ನು ಬೇರೆ ರೀತಿಯಲ್ಲಿ ಹೇಳಿ ಜನರನ್ನು ಹಾದಿ ತಪ್ಪಿಸುವ ಕಾರ್ಯ ಮಾಡುತ್ತಿವೆ ಎಂದು ಕೆಂಡಕಾರಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401