ದಿನದ ಸುದ್ದಿ
ಕುಂಚೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ‘ವಿಶ್ವ ಪರಿಸರ ದಿನಾಚರಣೆ’
ಸುದ್ದಿದಿನ,ವಿಜಯನಗರ : ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಕುಂಚೂರಿನ ನೇತಾಜಿ ಸುಭಾಷ್ ಚಂದ್ರಬೋಸ್ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಕುಂಚೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಬ್ಯಾನಾಯ್ಕ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ಶಾಲೆಗೆ, ಊರಿಗೆ ಮತ್ತು ತಮ್ಮ ತಂದೆ-ತಾಯಿಗಳಿಗೆ ಹೆಸರು ತರುವ ನಿಟ್ಟಿನಲ್ಲಿ ಅಭ್ಯಾಸ ಮಾಡಲು ಹೇಳಿ, ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ನೀಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜಾನಾಯ್ಕ್ ಮಾತನಾಡಿ, ಶಾಲೆಗೆ ಈಗಾಗಲೇ ನರೇಗಾ ಯೋಜನೆಯಡಿ ಮಂಜೂರಾದ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗಿದ್ದು ಉದ್ಘಾಟನೆಯೊಂದೇ ಬಾಕಿ ಇದೆ ಎಂದರು.
ಪಂಚಾಯಿತಿ ವತಿಯಿಂದ ಶಾಲೆಗೆ ಬರುವ ಎಲ್ಲಾ ಕಾಮಗಾರಿಗಳನ್ನು ಶೀಘ್ರದಲ್ಲೇ ಫ್ರಾರಂಭಿಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಶಾಲೆಗೆ ಅಗತ್ಯ ಸೌಲಭ್ಯಗಳನ್ನು ನಮ್ಮ ಪಂಚಾಯಿತಿ ಕಾರ್ಯಾಲಯದಿಂದ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ (SDMC) ಅಧ್ಯಕ್ಷರಾದ ಪಕ್ಕಿರಪ್ಪ ಅಣ್ಣಿಗೇರಿ, ಶಾಲಾ ಮುಖ್ಯೋಪಾಧ್ಯಾಯರಾದ ಮಹೇಶ್ ಎಸ್ ಬಸರಿಕಟ್ಟಿ, ಹಿರಿಯ ಶಿಕ್ಷಕರಾದ ಲಚುಮನಾಯ್ಕ್ , ತಳವಾರ ರಾಮಕೃಷ್ಣ , ದೈಹಿಕ ಶಿಕ್ಷಕರಾದ ಜಿ. ಅಬ್ದುಲ್ , ಸಹಶಿಕ್ಷಕರಾದ ಕೆ.ಸಾವಿತ್ರಿ, ಭಾಗ್ಯಸುಮಂಗಳ, ಶರ್ಮತ್ ಐ ಕಣದಮನಿ ಹಾಗೂ ಪಂಚಾಯಿತಿ ಕಾರ್ಯಾಲಯದ ಸಿಬ್ಬಂದಿ ಕೆಂಚಪ್ಪ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243