ದಿನದ ಸುದ್ದಿ

ನಾನು ಎಸ್ಟಿ ಹೋರಾಟಕ್ಕೆ ಬರಲು ಆಗಲ್ಲ, ಆದ್ರೆ ಬೆಂಬಲವಿದೆ ಎಂದು ಸಿದ್ದರಾಮಯ್ಯ ಹೇಳಿದ್ರು : ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ

Published

on

ಸುದ್ದಿದಿನ, ದಾವಣಗೆರೆ : ನಾನು ಎಸ್ಟಿ ಹೋರಾಟಕ್ಕೆ ಬರಲು ಆಗಲ್ಲ, ಆದರೆ ಬೆಂಬಲ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಬಹಿರಂಗವಾಗಿ ನಾನು ಹೋರಾಟಕ್ಕೆ ಬರಲು ಆಗುವುದಿಲ್ಲ, ನೀವು ಹೋರಾಟ ಮಾಡಿ ಎಂದಿದ್ದರು. ಅದಾದ ಮೇಲೆ ಈಶ್ವರಪ್ಪ ನವರ ಬೆಂಬಲ ಕೇಳಿದ್ದೆವು. ಈಶ್ವರಪ್ಪ ಮುಂಚೂಣಿ ವಹಿಸಿಕೊಂಡು ಇಷ್ಟೆಲ್ಲ ಕೆಲಸ ಮಾಡಿದ್ದಾರೆ ಎಂದು ದಾವಣಗೆರೆ ST ಹೋರಾಟ ಸಮಾವೇಶದಲ್ಲಿ ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಬುಧವಾರ ನಡೆದ ಕುರುಬರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.

ಕುರುಬ ಸಮಾಜದ ಮೇಲೆ ನಿರಂತರವಾಗಿ ದಬ್ಬಾಳಿಕೆ , ಜಾತಿ ನಿಂದನೆ, ಕುರಿಗಾಯಿಗಳ ಮೇಲೆ ಹಲ್ಲೆಗಳು ನಡೆಯುತ್ತಿವೆ. ಈ ಎಲ್ಲಾ ನೋವುಗಳನ್ನು ಸರಿಪಡಿಸಲು ಈ‌ ಎಸ್ಟಿ ಹೋರಾಟ ನಡೆಸಿದ್ದೇವೆ. ನಿಮಗಾಗಿ 300 ಕಿಲೋ ಮೀಟರ್ ಪಾದಯಾತ್ರೆ ಮಾಡುತ್ತಿದ್ದೇನೆ. ಹೋರಾಟದ ಮೂಲಕ ಎಸ್ಟಿ ಹಕ್ಕು ಪಡೆದೇ ಪಡೆಯುತ್ತೇವೆ ಎಂದು ನುಡಿದರು.

ಸಮಾವೇಶವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಉದ್ಘಾಟಿಸಿದರು.ಶಾಸಕರಾದ ಆರ್. ಶಂಕರ್, ಹರಿಹರ ಶಾಸಕ ಎಸ್.ರಾಮಪ್ಪ, ಮಾಜಿ ಸಚಿವ ಎಚ್ ಎಂ ರೇವಣ್ಣ ಸೇರಿ ಹಲವರು ಭಾಗಿಯಾಗಿದ್ದರು. ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀ ಹಾಗೂ ಈಶ್ವರಾನಂದಪುರಿ ಶ್ರೀ ನೇತೃತ್ವದಲ್ಲಿ ಸಮಾವೇಶ ನಡೆಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version