ದಿನದ ಸುದ್ದಿ
ನಾಳೆ ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಕುವೆಂಪು ಓದು : ಕಮ್ಮಟ’
ಸುದ್ದಿದಿನ.ಚನ್ನಗಿರಿ: ಕನ್ನಡ ಸಂಸ್ಕೃತಿ ಇಲಾಖೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಾಗೂ ಶ್ರೀ ಶಿವಲಿಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯಕ್ತ ಆಶ್ರಯದಲ್ಲಿ ‘ಕುವೆಂಪು ಓದು : ಕಮ್ಮಟ’ ನಾಳೆ (ಏ.9) ಬೆಳಗ್ಗೆ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.
ಕಮ್ಮಟದ ಉದ್ಘಾಟನೆಯನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಚನ್ನಪ್ಪ ಕಟ್ಟಿ ಮಾಡಲಿದ್ದು, ಸಂಚಾಲಕರಾದ ಭಾರತೀದೇವಿ.ಪಿ,ಹಾಗೂ ಕಮ್ಮಟದ ನಿರ್ದೇಶಕರಾದ ಸಾಹಿತಿ ಡಾ.ಎಚ್.ಟಿ.ಕೃಷ್ಣಮೂರ್ತಿ ಉಪಸ್ಥಿತರಿರಲಿದ್ದಾರೆ.
ಪ್ರಾಂಶುಪಾಲರಾದ ಡಾ.ಬಿ.ಜಿ. ಅಮೃತೇಶ್ವರ ಅವರು ಕಮ್ಮಟ ದ ಅಧ್ಯಕ್ಷತೆವಹಿಸಲಿದ್ದು, ಐ.ಕ್ಯು.ಎ.ಸಿ ಸಂಚಾಲಕರಾದ ವಿಜಯ್ ಕುಮಾರ್ ಎನ್.ಸಿ, ಇಂಗ್ಲಿಶ್ ವಿಭಾಗದ ಮುಖ್ಯಸ್ಥ ರಾದ ಜಯಪ್ಪ.ಸಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ರವಿ ಹಾಗೂ ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243