ದಿನದ ಸುದ್ದಿ
ಚನ್ನಗಿರಿ | ‘ಕುವೆಂಪು ಓದು : ಕಮ್ಮಟ’ ; ಚರ್ಚೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು
ಸುದ್ದಿದಿನ.ಚನ್ನಗಿರಿ: ಕನ್ನಡ ಸಂಸ್ಕೃತಿ ಇಲಾಖೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಾಗೂ ಶ್ರೀ ಶಿವಲಿಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯಕ್ತ ಆಶ್ರಯದಲ್ಲಿ ಬುಧವಾರ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಮ್ಮಟದ ಉದ್ಘಾಟನೆಯನ್ನು ಪ್ರಾಂಶುಪಾಲ ಅಮೃತೇಶ್ವರ ಬಿ.ಜಿ, ಮಾಡಿದರು. ಸಂಚಾಲಕಿ ಭಾರತೀದೇವಿ ಹಾಗೂ ಸಾಹಿತಿ ಡಾ.ಎಚ್.ಟಿ.ಕೃಷ್ಣಮೂರ್ತಿ ಕಮ್ಮಟವನ್ನು ನಡೆಸಿಕೊಟ್ಟರು. 50 ವಿದ್ಯಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿ ಚರ್ಚೆನಡೆಸಿದರು.
ಪ್ರಾಂಶುಪಾಲರಾದ ಡಾ.ಬಿ.ಜಿ. ಅಮೃತೇಶ್ವರ ಅವರು ಕಮ್ಮಟ ದ ಅಧ್ಯಕ್ಷತೆವಹಿಸಿದ್ದರು. ಐ.ಕ್ಯು.ಎ.ಸಿ ಸಂಚಾಲಕರಾದ ವಿಜಯ್ ಕುಮಾರ್ ಎನ್.ಸಿ, ಇಂಗ್ಲಿಶ್ ವಿಭಾಗದ ಮುಖ್ಯಸ್ಥ ರಾದ ಜಯಪ್ಪ.ಸಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ರವಿ, ಸಹಾಯಕ ಪ್ರಾಧ್ಯಾಪಕ ಷಣ್ಮುಖಪ್ಪ ಕೆ.ಎಚ್. ಹಾಗೂ ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ಶಕೀಲ್ ಅಹಮ್ಮದ್ ನಿರೂಪಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243