ದಿನದ ಸುದ್ದಿ
7 ತಿಂಗಳಾದರೂ ಸಿಗದ ಸಂಬಳ: ಪೌರಕಾರ್ಮಿಕ ಆತ್ಮಹತ್ಯೆ
ಸುದ್ದಿದಿನ ಡೆಸ್ಕ್: ಪೌರಕಾರ್ಮಿಕರ ಸಂಬಳ ನೀಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ಕಳೆದ ಏಳು ತಿಂಗಳಿನಿಂದ ಸಂಬಳ ಬರದ ಹಿನ್ನೆಲೆಯಲ್ಲಿ ನೊಂದ ಬಿಬಿಎಂಪಿ ಪೌರ ಕಾರ್ಮಿಕ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಜಧಾನಿಯ ಗುಟ್ಟಹಳ್ಳಿ ಮುನೇಶ್ವರ ಬ್ಲಾಕ್ ನಿವಾಸಿ ಸುಬ್ರಮಣಿ ಸಾವಿಗೀಡಾದ ಪೌರ ಕಾರ್ಮಿಕ. ಸಂಬಳ ನೀಡುವಂತೆ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಈತ ಇದು ಪ್ರಯೋಜನವಿಲ್ಲ ಎಂದು ಬಗೆದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಳೆದ ಏಳು ತಿಂಗಳಿನಿಂದ ಪೌರ ಕಾರ್ಮಿಕನಾಗಿ ದುಡಿಯುತ್ತಿದ್ದ ಸುಬ್ರಮಣಿ, ಈ ವಿಷಯವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥರ ಗಮನಕ್ಕೆ ತಂದಿದ್ದಾಗಿ ತಿಳಿದುಬಂದಿದೆ. ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾನೆ ಎನ್ನಲಾಗಿದೆ.
A labor suicide in bengaluru, karnataka