ದಿನದ ಸುದ್ದಿ

ಇಂಡೋನೇಷ್ಯಾದಲ್ಲಿ ಅಡುಗೆ ಎಣ್ಣೆಯ ಕೊರತೆ ; ರಫ್ತು ನಿಷೇಧ

Published

on

ಸುದ್ದಿದಿನ ಡೆಸ್ಕ್ : ವಿಶ್ವದಲ್ಲೇ ಬೃಹತ್ ಪ್ರಮಾಣದಲ್ಲಿ ತಾಳೆಎಣ್ಣೆ ಉತ್ಪಾದಿಸುವ ಇಂಡೋನೇಷ್ಯಾದಲ್ಲಿ ಅಡುಗೆ ಎಣ್ಣೆಯ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಮುಂದಿನ ವಾರದಿಂದ ತಾಳೆ ಎಣ್ಣೆ ರಫ್ತು ಮಾಡುವುದನ್ನ ನಿಷೇಧಿಸಲು ಅಲ್ಲಿನ ಸರ್ಕಾರ ಮುಂದಾಗಿದೆ.

ಕಳೆದ ನವೆಂಬರ್ ತಿಂಗಳಿಂದೀಚೆಗೆ ತಾಳೆ ಆಧಾರಿತ ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ಕೊರತೆ ಉಂಟಾಗಿದ್ದು, ಈ ಸಂದರ್ಭವನ್ನು ಬಳಸಿಕೊಂಡು ತಾಳೆಎಣ್ಣೆ ಉತ್ಪಾದಕರು ವಿದೇಶಗಳಿಗೆ ದುಬಾರಿ ಬೆಲೆಗೆ ರಫ್ತು ಮಾಡಲು ಮುಂದಾಗಿದ್ದಾರೆ. ಇದರಿಂದ ದೇಶೀಯವಾಗಿ ತಾಳೆಎಣ್ಣೆ ಕೊರತೆ ಉಂಟಾಗಲಿದ್ದು, ಬೆಲೆಗಳು ಗಗನಕ್ಕೇರುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗುವ ಭೀತಿ ಎದುರಾಗಿದೆ. ಇದನ್ನು ನಿವಾರಿಸಲು ಸಾಕಷ್ಟು ಪ್ರಮಾಣದಲ್ಲಿ ತಾಳೆಎಣ್ಣೆಯನ್ನು ಸಂಗ್ರಹಿಸಿಡಲು ಸರ್ಕಾರ ಮುಂದಾಗಿದೆ. ಇದೇ ಕಾರಣಕ್ಕಾಗಿ ತಾಳೆಎಣ್ಣೆ ರಫ್ತು ಮಾಡುವುದನ್ನು ನಿಷೇಧಿಸಲು ಸರ್ಕಾರ ತೀರ್ಮಾನಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version