ದಿನದ ಸುದ್ದಿ
ಲೇಡಿ ಡಾನ್ ರಿವಾಲ್ವರ್ ರಾಣಿ ಅರೆಸ್ಟ್..!
ಸುದ್ದಿದಿನ,ನವದೆಹಲಿ: ಉತ್ತರ ಭಾರತದ ಮೋಸ್ಟ್ ವಾಂಟೆಡ್ ಆಗಿದ್ದ ರಿವಾಲ್ವರ್ ರಾಣಿ ಕುಖ್ಯಾತಿಯ ಅನುರಾಧ ಚೌಧರಿ ಮತ್ತು ಕಾಲಾ ಜತೆಡಿ ಎಂದೇ ಹೆಸರಾಗಿದ್ದ ಸಂದೀಪ್ ಅವರನ್ನು ಬೃಹತ್ ಕಾರ್ಯಾಚರಣೆವೊಂದರಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಅನುರಾಧ ಚೌಧರಿ ರಾಜಸ್ಥಾನದಲ್ಲಿ ಲೇಡಿ ಡಾನ್ ರಿವಾಲ್ವರ್ ರಾಣಿ ಎಂದು ಕುಖ್ಯಾತಿ ಪಡೆದಿದ್ದಳು. ಈಕೆಯ ಸುಳಿವು ನೀಡಿದವರಿಗೆ 10 ಸಾವಿರ ರೂ. ಬಹುಮಾನ ಘೋಷಿಸಲಾಗಿತ್ತು. ಈಕೆ ಅಪಹರಣ, ಬೆದರಿಕೆ, ಶಸ್ತ್ರಾಸ್ತ್ರ, ವಂಚನೆ ಮತ್ತು ಅಕ್ರಮ ಮದ್ಯ ಮಾರಾಟ ಸೇರಿದಂತೆ ಹಲವು ಕ್ರಿಮಿನಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಳು ಎನ್ನಲಾಗಿದೆ.
ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಲೆಗೆ ಗುತ್ತಿಗೆ ಪಡೆಯುವುದು, ಬೂಟ್ ಲೆಗ್ಗಿಂಗ್, ಜಮೀನು ಒತ್ತುವರಿ ಸೇರಿದಂತೆ ಹಲವು ಅಕ್ರಮಗಳ ಸಿಂಡಿಕೇಟ್ ನಡೆಸುತ್ತಿದ್ದ ಸಂದೀಪ್ ಪೊಲೀಸರ ನಿದ್ದೆಗೆಡಿಸಿದ್ದರು. ಸದ್ಯ ಈ ಇಬ್ಬರನ್ನೂ ಬಂಧಿಸಲಾಗಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243