ಲೈಫ್ ಸ್ಟೈಲ್

ಸರ್ವವೂ ಲಕ್ಷ್ಮಿಮಯ ; ಲಕ್ಷ್ಮಿ ಕಟಾಕ್ಷ..!

Published

on

ಷಾಢ ಮುಗಿದು ಶ್ರಾವಣದ ಹೊಸ್ತಿಲಲ್ಲಿ ನಿಂತಿರುವ ಸ್ತ್ರೀ ಲೋಕ, ಸಾಲು ಸಾಲು ಹಬ್ಬಗಳ ಸಡಗರದಲ್ಲಿ ಬಿಜಿ. ಮಹಿಳೆಯರ ಹಬ್ಬದ ಸಂಭ್ರಮವನ್ನು ಇಮ್ಮಡಿ ಗೂಳಿಸಲು ತಯಾರಾಗಿದೆ ಶ್ರಾವಣದ ರೇಷ್ಮೆ ಫ್ಯಾಷನ್. ಶುಕ್ರವಾರ ದ ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನೇನು ದಿನಗಣನೆ ಶುರುವಾಗಿದ್ದು, ಸಾಂಪ್ರದಾಯಿಕ ರೇಷ್ಮೆ ಸೀರೆ, ಜರತಾರಿ ಲಂಗ-ಲಾವಣಿ.. ರೇಷ್ಮೆ ಲಾಂಗ್ ಗೌನ್ ಗಳ ಫ್ಯಾಷನ್ ಚಾಲ್ತಿಯಲ್ಲಿದೆ.ಕೈ ತುಂಬಾ ಬಳೆ, ಕಾವ್ಯಗಳಲ್ಲಿ ಗೆಜ್ಜೆ ಯ ಸಪ್ಪಳ, ಚೆಂದದ ಮುಖಕ್ಕೆ ಮುತ್ತಿಡುವ ಅರಿಶಿನ-ಕುಂಕುಮ;ನಾಗವೇಣಿಯನ್ನೂ ನಾಚಿಸುವಂಥ ಮಾರುದ್ದ ಜಡೆ-ಕುಚ್ಚು..ಸಾಕ್ಷಾತ್ ಕೋಲ್ಹಾಪುರದ  ಮಹಲಕ್ಷ್ಮೀ  ದೇವಿಯೇ ಧರೆಗಿಳಿದು ಬಂದಂತೆ ಭಾಸವಾಗುವುದು ಮನೆ-ಮನಸ್ಸು ಬೆಳಗೋ ಮನೆಯ ಮಹಾಲಕ್ಷೀಯರ ಅಲಂಕಾರ.

ಲಕ್ಷ್ಮಿ ಡಿಸೈನ್ ಆಭರಣಗಳ ಟ್ರೆಂಡ್ ಮರುಕಳಿಸಿದೆ

ಹೊಚ್ಚ ಹೊಸಾ ವಿನ್ಯಾಸದಲ್ಲಿ  ಲಕ್ಷ್ಮಿ ಡಿಸೈನ್ ಝುಮಕಿ ಗಳು  ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮುತ್ತು,ರತ್ನ, ಹರಳು, ಪಚ್ಚೆ, ಗಳ ಕಾಂಬಿನೇಷನ್ ಇರುವ ಆಕರ್ಷಕ ಝುಮಕಿ ಗಳು ಚಂದ್ರಮುಖಿಯರನ್ನ ಕೈಬೀಸಿ ಕರೆಯುತ್ತಿದೆ.

ಲಕ್ಷ್ಮಿ ಕಾಸಿನ ಹಾರ, ಲಕ್ಷ್ಮಿ ಕಾಸಿನ ಬಳೆ, ಓಲೆ ..ಇವೆಲ್ಲವೂ ಮತ್ತೆ ಟ್ರೆಂಡೀ ಎನಿಸಿಕೊಂಡಿದ್ದು, ಈ ವಿನ್ಯಾಸಗಳ  ಬೇಡಿಕೆ ಹೆಚ್ಚಿದೆ. ಈ ಟ್ರೆಂಡ್ ಕೇವಲ ಚಿನ್ನಾಭರಣಗಳಿಗೆ ಮಾತ್ರ ಸೀಮಿತಗೂಳ್ಳದೆ, ಬ್ಲಾಕ್ ಮೆಟಲ್, ವೈಟ್ ಮೆಟಲ್, ಬೀಡೆಡ್ ಜಿವಲೆರಿ ಗಳಲ್ಲೂ ಮುಂದುವರೆದಿದೆ.

ಆಭರಣ ವಿನ್ಯಾಸಕರು ಏನನ್ನುತ್ತಾರೆ?

ಪ್ರತಿಷ್ಠಿತ ಸೆಲಿಬ್ರಿಟಿ  ಆಭರಣ ವಿನ್ಯಾಸಕಿ ಸೀಮಾ ರ ಪ್ರಕಾರ ಎಲ್ಲವೂ “ಲಕ್ಷ್ಮಿಮಯ” ವಾಗಿದೆ. ಮಹಿಳೆಯರ ಪ್ರಧಾನ ಹಬ್ಬವಾಗಿರುವ ವರಮಹಾಲಕ್ಷ್ಮಿ ಹಬ್ಬಕ್ಕೆಂದೇ ಲಕ್ಷ್ಮಿ ಡಿಸೈನ್ ಆಭರಣಗಳ ಟ್ರೆಂಡ್ ಮರುಕಳಿಸಿದೆ ಎನ್ನುತ್ತಾರೆ ಸೀಮ.

Leave a Reply

Your email address will not be published. Required fields are marked *

Trending

Exit mobile version